×
Ad

ಎ.28-29: ಕ್ರೀಡಾಸಕ್ತ ವಿದ್ಯಾರ್ಥಿಗಳಿಗೆ ನಿಟ್ಟೆಯಲ್ಲಿ ಆಯ್ಕೆ ಶಿಬಿರ

Update: 2017-03-18 13:40 IST

ಕಾರ್ಕಳ, ಮಾ.18: ನಿಟ್ಟೆ ವಿದ್ಯಾಸಂಸ್ಥೆಯಿಂದ ವಾಲಿಬಾಲ್, ಬಾಸ್ಕೆಟ್‌ಬಾಲ್, ಹಾಕಿ, ಅತ್ಲೆಟಿಕ್ಸ್‌ಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಎಪ್ರಿಲ್ 28 ಮತ್ತು 29ರಂದು ನಿಟ್ಟೆ ವಿದ್ಯಾಸಂಸ್ಥೆಯ ಬಿ.ಸಿ. ಆಳ್ವ ಕ್ರೀಡಾ ಸಂಕೀರ್ಣ ಮೈದಾನದಲ್ಲಿ ಹಮ್ಮಿಕೊಂಡಿದೆ.

ಕ್ರೀಡಾಪಟುಗಳ ಅರ್ಹತೆಗೆ ತಕ್ಕಂತೆ ಶಿಕ್ಷಣದೊಂದಿಗೆ ಊಟ, ವಸತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲಾಗುವುದು. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಿಟ್ಟೆ ವಿದ್ಯಾ ಸಂಸ್ಥೆಯು ತಮ್ಮ ಶಾಲಾ ಕಾಲೇಜುಗಳಲ್ಲಿ ನುರಿತ ತರಬೇತುದಾರರಿಂದ ಗುಣಮಟ್ಟದ ಕ್ರೀಡಾ ಶಿಕ್ಷಣವನ್ನು ಹಲವಾರು ವರ್ಷಗಳಿಂದ ನೀಡುತ್ತಾ ಬಂದಿದೆ. ಇದರಿಂದ ನಿಟ್ಟೆಯ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು ಅರ್ಹತಾ ಪತ್ರಗಳೊಂದಿಗೆ ಎ.28ರಂದು ಬೆಳಗ್ಗೆ 9ಗಂಟೆಗಿಂತ ಮೊದಲು ಕ್ರೀಡಾ ನಿರ್ದೇಶಕರು, ನಿಟ್ಟೆ ವಿದ್ಯಾ ಸಂಸ್ಥೆಯ ಸಂಕಿರ್ಣ, ನಿಟ್ಟೆ ಕಾರ್ಕಳ ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಮೇಲೆ ಉಲ್ಲೇಖಿಸಿದ ಕ್ರೀಡೆಗಳಿಗೆ ತರಬೇತಿ ಶಿಬಿರವು ಎಪ್ರಿಲ್ 17ರಿಂದ 29ರವರೆಗೆ ನಿಟ್ಟೆ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9482132079/9449664448/9964319830 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News