×
Ad

ಬಾಯಾರ್ ಸ್ವಲಾತ್ ಮಜ್ಲಿಸ್, ಪಝಮಲ್ಲೂರ್ ತಂಙಳ್ ಅವಾರ್ಡ್ ಪ್ರದಾನ ಕಾರ್ಯಕ್ರಮ

Update: 2017-03-18 15:58 IST

ಬಾಯಾರ್, ಮಾ.18: ಇಲ್ಲಿನ ಮುಜಮ್ಮಉಸ್ಸಖಾಫತಿಸ್ಸುನ್ನಿಯ್ಯದಲ್ಲಿ ಸ್ವಲಾತ್ ಮಜ್ಲಿಸ್ ಮತ್ತು ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದರಿಗೆ ಪಝಮಲ್ಲೂರ್ ತಂಙಳ್ ಅವಾರ್ಡ್ ಕಾರ್ಯಕ್ರಮ ಶುಕ್ರವಾರ ರಾತ್ರಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಖಿಲ ಭಾರತ ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮಾತನಾಡಿ ಶುಭ ಹಾರೈಸಿದರು. ಅಸ್ಸೈಯದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕ್ಕೋಯ ತಂಙಳ್ ಅಲ್-ಬುಖಾರಿಯವರು ಸ್ವಲಾತ್ ಮಜ್ಲಿಸ್ ಹಾಗೂ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಈ ಸಂದರ್ಭ ಬಾಯಾರ್ ಮುಜಮ್ಮಉಸ್ಸಖಾಫತಿಸ್ಸುನ್ನಿಯ್ಯದ ಅಧ್ಯಕ್ಷ ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ಅಲ್‌ಬುಖಾರಿ ಬಾಯಾರ್ ತಂಙಳ್ ಅವರ ತಂದೆ ಅಸ್ಸೈಯದ್ ಅಬ್ದುಲ್ ಖಾದಿರ್ ಕುಂಞಿ ತಂಙಳ್ ಪಝಮಳ್ಳೂರು ತಂಙಳ್‌ರವರ ಸ್ಮರಣಾರ್ಥ ನೀಡಲಾಗುವ ಪ್ರಥಮ ಪ್ರಶಸ್ತಿ ‘ಪಝಮಲ್ಲೂರ್ ತಂಙಳ್ ಅವಾರ್ಡ್’ ಅನ್ನು ಕರ್ಮಶಾಸ್ತ್ರ ಪ್ರಕಾರದಲ್ಲಿರುವ ಅಗಾಧ ಪಾಂಡಿತ್ಯ ಮತ್ತು ದೀರ್ಘಕಾಲೀನ ದರ್ಸ್ ಸೇವೆಯನ್ನು ಪರಿಗಣಿಸಿ ಹಿರಿಯ ಧಾರ್ಮಿಕ ವಿದ್ವಾಂಸ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಮುಹ್ಯಿಸ್ಸುನ್ನ ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 50,001 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿತ್ತು.

ಸಿ.ಅಬ್ದುಲ್ಲ ಮುಸ್ಲಿಯಾರ್, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಬಾಯಾರ್ ಅಬ್ದುಲ್ಲ ಮುಸ್ಲಿಯಾರ್, ಸೈಯದ್ ಮುನೀರುಲ್ ಅಹ್ದಲ್, ಸ್ವಲಾಹುದ್ದೀನ್ ಅಯ್ಯೂಬಿ, ಸಿ.ಎನ್.ಜಾಫರ್ ಸ್ವಾದಿಕ್, ಸ್ವಾದಿಕ್ ಆವಳ, ಹಾರಿಸ್ ಹಿಮಮಿ ಪರಪ್ಪ, ಅಝೀಝ್ ಸಖಾಫಿ ಮಚ್ಚಂಪಾಡಿ, ಇಬ್ರಾಹೀಂ ಫೈಝಿ ಕನ್ಯಾನ, ಜಲೀಲ್ ಕರೋಪಾಡಿ, ಶಾಕೀರ್ ಮಿತ್ತೂರು, ಉದ್ಯಮಿ ಸಿದ್ದೀಕ್ ಹಾಜಿ ಮಂಗಳೂರು, ಸಿದ್ದೀಕ್ ಲತೀಫಿ ಉಪಸ್ಥಿತರಿದರು.

ಮ್ಯಾನೇಜರ್ ಸಿದ್ದೀಕ್ ಸಖಾಫಿ ಬಾಯಾರ್ ಸ್ವಾಗತಿಸಿದರು. ಪೊಯ್ಯತ್ತಬೈಲ್ ಖತೀಬ್ ಜಬ್ಬಾರ್ ಪಾತೂರು ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News