ನಳಿನಿ ಫೈನಾನ್ಸ್ ಸಂಸ್ಥೆ ಮೂಲಕ ವಂಚನೆ ಪ್ರಕರಣ: ಆರೋಪಿ ಮಹಿಳೆಗೆ 2 ವರ್ಷ ಜೈಲು ಶಿಕ್ಷೆ
Update: 2017-03-18 16:09 IST
ಮಂಗಳೂರು, ಮಾ.18: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಳಿನಿ ಫೈನಾನ್ಸ್ ಸಂಸ್ಥೆಯನ್ನು ಸ್ಥಾಪಿಸಿ ಹಲವು ಜನರಿಗೆ ಮೋಸ ಮಾಡಿರುವ ಬಗ್ಗೆ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದ ಆರೋಪಿ ನಳಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಲವು ದಿನಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬೋಳಂತೂರು ಗ್ರಾಮ ಸುರಿಬೈಲು ಬಿರುಕೋಡಿ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪತ್ನಿ ನಳಿನಿ(53) ಬಂಧಿತ ಆರೋಪಿ. ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆಕೆಗೆ 2 ವರ್ಷ ಜೈಲು ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿದೆ.
ಆರೋಪಿಯನ್ನು ಡಿವೈಎಸ್ಪಿರವೀಶ್ ಸಿ.ಆರ್. ಸಿಪಿಐ ಮಂಜಯ್ಯ ಮಾರ್ಗದರ್ಶನದಲ್ಲಿ ವಿಟ್ಲ ಪಿಎಸ್‌ಐ ನಾಗರಾಜ್, ಸಿಬ್ಬಂದಿ ಇಬ್ರಾಹೀಂ, ಪ್ರವೀಣ್, ರಕ್ಷಿತ್, ಚಿತ್ರಲೇಖಾ ತಂಡ ಪತ್ತೆ ಹಚ್ಚಿದೆ.