×
Ad

ಎಸ್‌ಬಿಐ ಎಟಿಎಂ ದರೋಡೆ: ಮೂವರ ಸೆರೆ

Update: 2017-03-18 17:01 IST

ಮುಂಬೈ, ಮಾ. 18: ಧಾರಾವಿಯ ಎಸ್‌ಬಿಐ ಎಟಿಎಂಗೆ ಹಣ ತುಂಬಲು ಬಂದ ವಾಹನದಿಂದ 1.53 ಕೋಟಿ ರೂಪಾಯಿ ದರೋಡೆ ಮಾಡಿದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ತಮಿಳ್ನಾಡಿನ ನಿವಾಸಿಗಳಾಗಿದ್ದು, ಆರೋಪಿಗಳನ್ನು ಸುರೇಶ್‌ಕುಮಾರ್ ಪಾಂಡುರಂಗ್, ಅರ್ಮುಗಂ ಸುಬ್ರಹ್ಮಣಿ, ನಾಗರಾಜ್ ಎಂದು ಗುರುತಿಸಲಾಗಿದೆ.

 ಮಹಾರಾಷ್ಟ್ರದಿಂದತಪ್ಪಿಸಿ ಬೇರೆಡೆಗೆ ಹೋಗಲು ಯತ್ನಿಸಿದ ಇವರನ್ನು ಸತಾರದ ಟೋಲ್ ಬೂತ್‌ನಲ್ಲಿ ಖಾಸಗಿ ಬಸ್‌ನಲ್ಲಿಪ್ರಯಾಣಿಸುತ್ತಿದ್ದಾಗ ಮಹಾರಾಷ್ಟ್ರ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

ಗುರುವಾರ ಧಾರಾವಿ, ಸಂತ್ ರೋಹಿದಾಸ್ ಮಾರ್ಗದ ಎಸ್‌ಬಿಐ ಎಟಿಎಂಗೆ ಹಣ ತುಂಬಿಸುತ್ತಿದ್ದ ವೇಳೆ ಹಣವನ್ನು ಅಲ್ಲಿಗೆ ತಂದಿದ್ದ ವಾಹನದಿಂದ ಆರೋಪಿಗಳು ಹಣ ದೋಚಿದ್ದರು. ಪ್ರಕರಣದಲ್ಲಿ ಇನ್ನೂ ಒಂಬತ್ತುಮಂದಿಯನ್ನು ಬಂಧಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News