×
Ad

ಮಂಗಳೂರು: ಮಾ.19ರಂದು ಡೆಲ್ಟಾ ಕಣ್ಣಿನ ಆಸ್ಪತ್ರೆ ಉದ್ಘಾಟನೆ

Update: 2017-03-18 18:05 IST

ಮಂಗಳೂರು, ಮಾ.18: ನಗರದ ಬೆಂದೂರ್‌ವೆಲ್ ಮುಖ್ಯ ರಸ್ತೆಯಲ್ಲಿರುವ, ಹಳೆಯ ವಾಸನ್ ಕಣ್ಣಿನ ಆಸ್ಪತ್ರೆ ಕಟ್ಟಡದಲ್ಲಿ ನೂತನವಾಗಿ ಕಾರ್ಯಾರಂಭಿಸಲಿರುವ ಡೆಲ್ಟಾ ಕಣ್ಣಿನ ಆಸ್ಪತ್ರೆಯು  ಮಾ.19ರಂದು ಉದ್ಘಾಟನೆಗೊಳ್ಳಲಿದೆ.

ಬೆಳಗ್ಗೆ 10:30ಕ್ಕೆ ಸಚಿವ ಯು. ಟಿ. ಖಾದರ್ ಆಸ್ಪತ್ರೆ ಉದ್ಘಾಟಿಸಲಿದ್ದು, ಶಾಸಕ ಜೆ. ಆರ್. ಲೋಬೊ ಆಸ್ಪತ್ರೆ ಸಂಕೀರ್ಣದಲ್ಲಿರುವ ಡೆಲ್ಟಾ ಒಪ್ಟಿಕಲ್ಸ್‌ಗೆ ಚಾಲನೆ ನೀಡಲಿದ್ದಾರೆ.

ಹಿರಿಯ ವೈದ್ಯ ಡಾ. ಎಂ. ಶಾಂತಾರಾಮ ಶೆಟ್ಟಿ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಚಾಲನೆ ನೀಡಲಿದ್ದು, ಮನಪಾ ಕಾರ್ಪೊರೇಟರ್ ನವೀನ್ ಆರ್. ಡಿಸೋಜ ಡೆಲ್ಟಾ ಮೆಡಿಕಲ್ಸ್ ಉದ್ಘಾಟಿಸಲಿದ್ದಾರೆ. ಡೆಲ್ಟಾ ಹೆಲ್ತ್ ಫೌಂಡೇಶನ್‌ನ ಅಧ್ಯಕ್ಷ ಡಾ. ಭರತ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕೈಗೆಟಕುವ ದರದಲ್ಲಿ ವಿಶ್ವ ದರ್ಜೆಯ ಕಣ್ಣಿನ ಚಿಕಿತ್ಸೆ ನೀಡುವುದು ಸಂಸ್ಥೆಯ ಧ್ಯೇಯವಾಗಿದ್ದು, ನುರಿತ ವೈದ್ಯರ ತಂಡ, ವಿನೂತನ ಪ್ರಯೋಗಾಲಯ, ಸುಸಜ್ಜಿತ ತಪಾಸಣಾ ಕೇಂದ್ರ, ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ವಿಭಾಗ, ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಭಾಗ, ಅತ್ತ್ಯುತ್ತಮ ಸಿಬ್ಬಂದಿ ಸೇವೆಗಳು ಸಂಸ್ಥೆಯ ವಿಶೇಷತೆಯಾಗಿವೆ. ದೇಶ-ವಿದೇಶಗಳ ಅನೇಕ ಬ್ರಾಂಡ್‌ಗಳ ಫ್ರೇಮ್, ಲೆನ್ಸ್, ಕಾಂಟಾಕ್ಟ್ ಲೆನ್ಸ್‌ಗಳು ಡೆಲ್ಟಾ ಒಪ್ಟಿಕಲ್ಸ್ ನಲ್ಲಿ ಲಭ್ಯವಿದ್ದು, ತ್ವರಿತ ಸೇವೆ ನೀಡಲಾಗುತ್ತದೆ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News