×
Ad

ಬಾಲಿವುಡ್ ನಟಿ ಐಶ್ಚರ್ಯ ರೈ ತಂದೆ ನಿಧನ

Update: 2017-03-18 18:54 IST

ಮುಂಬಯಿ, ಮಾ.18: ಪ್ರಸಿದ್ಧ ಬಾಲಿವುಡ್ ನಟಿ ಐಶ್ಚರ್ಯ ರೈ ಅವರ ತಂದೆ ಕೃಷ್ಣರಾಜ್ ರೈ (78.) ಅವರು ಇಂದಿಲ್ಲಿ ಶನಿವಾರ ಬಾಂದ್ರಾ ಪಶ್ಚಿಮದ ಲೀಲಾವತಿ ಅಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಕೃಷ್ಣರಾಜ್ ಅವರು ದಕ್ಷಿಣ ಕನ್ನಡದ ಮಂಗಳೂರಿನ ಕೌಡೂರು ಮೂಲದವರಾಗಿದ್ದು, ಪತ್ನಿ ವೃಂದಾ ಕೆ.ರೈ, ಪುತ್ರ ಆದಿತ್ಯ ರೈ, ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್, ಮೊಮ್ಮಗಳು ಆರಾಧ್ಯ ಬಚ್ಚನ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಶನಿವಾರ ರಾತ್ರಿ ಸಾಂತಕ್ರೂಜ್ ಪಶ್ಚಿಮದ ಜುಹೂ ಅಲ್ಲಿನ ಪವನ್‌ಹಂಸ್ ಸ್ಮಶಾನಭೂಮಿಯಲ್ಲಿ ನೇರವೇರಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News