ಆಕಾಶದಲ್ಲಿ ವಿಮಾನಗಳ ಢಿಕ್ಕಿ : ಓರ್ವ ಪೈಲಟ್ ಸಾವು

Update: 2017-03-18 14:31 GMT

ಮಾಂಟ್ರಿಯಲ್, ಮಾ. 18: ಕೆನಡದ ಜನನಿಬಿಡ ಶಾಪಿಂಗ್ ಮಾಲೊಂದರ ಮೇಲಿನ ಆಕಾಶದಲ್ಲಿ ಶುಕ್ರವಾರ ಎರಡು ಸಣ್ಣ ವಿಮಾನಗಳು ಢಿಕ್ಕಿಯಾಗಿವೆ. ಒಂದು ವಿಮಾನದ ಪೈಲಟ್ ಮೃತಪಟ್ಟರೆ, ಇನ್ನೊಂದು ವಿಮಾನದ ಪೈಲಟ್ ಗಾಯಗೊಂಡಿದ್ದಾರೆ. ಆದರೆ, ನೆಲದ ಮೇಲಿದ್ದವರು ಪವಾಡ ಸದೃಶ ಪಾರಾಗಿದ್ದಾರೆ.

ಒಂದು ವಿಮಾನ ಮಾಂಟ್ರಿಯಲ್‌ನಿಂದ 20 ಕಿಲೋಮೀಟರ್ ದೂರದಲ್ಲಿರುವ ಶಾಪಿಂಗ್ ಮಾಲ್‌ನ ಮೇಲ್ಛಾವಣಿಯಲ್ಲಿ ಪತನಗೊಂಡಿದೆ ಹಾಗೂ ಇನ್ನೊಂದು ವಾಹನ ನಿಲುಗಡೆ ಸ್ಥಳಕ್ಕೆ ಅಪ್ಪಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News