ಟ್ವಿಟರ್ ಇಲ್ಲದಿದ್ದರೆ ನಾನಿಲ್ಲಿರುತ್ತಿರಲಿಲ್ಲ : ಟ್ರಂಪ್

Update: 2017-03-18 14:30 GMT

ವಾಶಿಂಗ್ಟನ್, ಮಾ. 18: ಟ್ವಿಟರ್‌ನಿಂದಾಗಿ ತಾನು ಈಗಿನ ಸ್ಥಾನಕ್ಕೆ ತಲುಪಲು ಸಾಧ್ಯವಾಯಿತು ಹಾಗೂ ಮಾಧ್ಯಮವನ್ನು ನಿವಾರಿಸಲು ತನಗೆ ಇದು ಸಹಾಯವಾಯಿತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

‘‘ಟ್ವಿಟರ್ ಇಲ್ಲದಿದ್ದರೆ ಬಹುಷ: ನಾನು ಇಂದು ಇಲ್ಲಿ ಇರುತ್ತಿರಲಿಲ್ಲ. ನಮ್ಮ ಮಾತುಗಳನ್ನು ಕೇಳುವ ಬಹು ದೊಡ್ಡ ಗುಂಪೊಂದನ್ನು ನಾವು ಹೊಂದಿದ್ದೇವೆ. ಮಾಧ್ಯಮವು ಸತ್ಯ ಹೇಳುವುದನ್ನು ನಿಲ್ಲಿಸಿದಾಗ, ನಾನು ಅದನ್ನು ಅವಲಂಬಿಸುವ ಅಗತ್ಯವಿರುವುದಿಲ್ಲ. ಹಾಗಾಗಿ, ನಾನು ಟ್ವಿಟರನ್ನು ಇಷ್ಟಪಡುತ್ತೇನೆ’’ ಎಂದು ಅವರು ಹೇಳಿದರು.

ಅಮೆರಿಕಕ್ಕೆ ಭೇಟಿ ನೀಡಿರುವ ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಜೊತೆಗೆ ಶುಕ್ರವಾರ ಶ್ವೇತಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವೇಳೆ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ನೀವೆಂದಾದರೂ ನಿಮ್ಮ ಟ್ವೀಟ್‌ಗಳ ಬಗ್ಗೆ ವಿಷಾದಿಸಿದ್ದಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News