ಮಂಗಳೂರು: ಅಂಗಡಿಯಿಂದ ನಗ, ನಗದು ಕಳವು
Update: 2017-03-18 22:49 IST
ಮಂಗಳೂರು, ಮಾ. 18: ಅಂಗಡಿಯೊಂದರಿಂದ ನಗ, ನಗದು ದೋಚಿರುವ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಕೃಷ್ಣ ಎಂಬವರು ಜಪ್ಪಿನಮೊಗರು ಗ್ರಾಮದ ಲಕ್ಷೀತೋಟ ಮನೆಯ ಹತ್ತಿರ ಸಣ್ಣ ಅಂಗಡಿಯೊಂದನ್ನು ನೆಡೆಸುತ್ತಿದ್ದು. ಎಂದಿನಂತೆ ಶುಕ್ರವಾರ ರಾತ್ರಿ 10:30ಕ್ಕೆ ಅಂಗಡಿ ಬಂದ್ ಮಾಡಿ ಬೀಗ ಹಾಕಿದ್ದರು. ಶನಿವಾರ ಬೆಳಗ್ಗೆ 6:30ಕ್ಕೆ ಅಂಗಡಿಗೆ ಬಂದ ಸಂದರ್ಭದಲ್ಲಿ ಬೀಗ ಒಡೆಯಲಾಗಿದ್ದು, ಒಳಗೆ ನೋಡಿದಾಗ ಮೇಜಿನ ಡ್ರಾವರ್‌ನಲ್ಲಿದ್ದ ಒಂದೂವರೆ ಪವನ್ ತೂಕದ ಚಿನ್ನದ ಬ್ರಾಸ್‌ಲೆಟ್, ಒಂದು ಮುಕ್ಕಾಲು ಪವನ್‌ನ ಉಂಗುರ, 8,000 ರೂ. ನಗದು ಹಾಗೂ ಚಾಕಲೇಟು, ಬೀಡಿಗಳನ್ನು ಕಳವು ಆಗಿರುವುದು ಗೊತ್ತಾಗಿದೆ. ಕಳವಾಗಿರುವ ವಸ್ತುಗಳ ಒಟ್ಟು ವೌಲ್ಯ 49,500 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಾಲಕೃಷ್ಣ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.