ಬಸ್ಸಿನಿಂದ ಬಿದ್ದು ಗಂಭೀರ ಗಾಯ
Update: 2017-03-18 22:54 IST
ಮಂಗಳೂರು, ಮಾ. 18: ವ್ಯಕ್ತಿಯೋರ್ವ ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಮುಕ್ಕ ಚೆಕ್‌ಪೋಸ್ಟ್ ಬಳಿ ಶನಿವಾರ ನಡೆದಿದೆ.
ಗಾಯಾಳು ವ್ಯಕ್ತಿಯ ಬಗ್ಗೆ ವಿವರ ಲಭ್ಯವಾಗಿಲ್ಲ. ಕಾರ್ಕಳದಿಂದ ಮಂಗಳೂರಿನ ಕಡೆಗೆ ಬರುತ್ತಿದ್ದ ಬಸ್ಸನ್ನು ಹಳೆಯಂಗಡಿಯ ಬಳಿ ಹತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಬಸ್ಸು ಮುಕ್ಕ ಚೆಕ್‌ಪೋಸ್ಟ್ ಬಳಿ ತಲುಪುತ್ತಿದ್ದತೆ ಚಾಲಕ ಹಠಾತಾಗಿ ಬ್ರೇಕ್ ಹಾಕಿದ ಪರಿಣಾಮ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುವನ್ನು ನಗರದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕರಣವನ್ನು ದಾಖಲಿಸಿಕೊಂಡಿರುವ ಸಂಚಾರ ಉತ್ತರ ಠಾಣಾ ಪೊಲೀಸರು ತಿಳಿಸಿದ್ದಾರೆ.