×
Ad

ಮಾ.25: ಜಿಲ್ಲಾ ಯುವ ಸಮಾವೇಶ

Update: 2017-03-19 00:05 IST

ಮಂಗಳೂರು, ಮಾ.18: ನೆಹರೂ ಯುವ ಕೇಂದ್ರ ಹಾಗೂ ಜಿಲ್ಲಾ ಯುವ ಜನ ಒಕ್ಕೂಟ, ದ.ಕ. ಜಿಲ್ಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಮಾ.25ರಂದು ಬೆಳಗ್ಗೆ 9:30ಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ಕಟೀಲಿನಲ್ಲಿ ಜಿಲ್ಲಾ ಯುವ ಸಮಾವೇಶವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಯುವಕ ಯುವತಿ ಮಂಡಳದ ಸದಸ್ಯರು ಭಾಗವಹಿಸಬಹುದಾಗಿದೆ.

ನೆಹರೂ ಯುವ ಕೇಂದ್ರದ 2017-18ರ ಕ್ರಿಯಾ ಯೋಜನೆ ಪಟ್ಟಿಯ ವಿವರ, ಭಾರತ ಸರಕಾರದ ನೆಹರೂ ಯುವ ಕೇಂದ್ರಕ್ಕೆ ಕಾರ್ಯಕರ್ತರ ಹುದ್ದೆಗೆ ಹಾಗೂ ಸಂದರ್ಶನದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News