ಬೀಡಿ ಕಾರ್ಮಿಕರಿಂದ ನಾಳೆ ಬೀಡಿ ಕಂಪೆನಿಗೆ ಮುತ್ತಿಗೆ

Update: 2017-03-18 18:37 GMT

ಉಡುಪಿ, ಮಾ.18: ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶ ದಂತೆ 2015-16ರ ಬಾಕಿ ತುಟ್ಟಿ ಭತ್ತೆಯನ್ನು ನೀಡುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರು ಉಡುಪಿ ಭಾರತ್ ಬೀಡಿ ಡಿಪೊ ಎದುರು ಮಾ.20ರಂದು ಬೃಹತ್ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.

ಕರ್ನಾಟಕ ರಾಜ್ಯ ಕಾರ್ಮಿಕ ಸಚಿವರು ಬೀಡಿ ಮಾಲಕರ ಕನಿಕರಕ್ಕೊಳಗಾಗಿ ಬೀಡಿಕಾರ್ಮಿಕರಿಗೆ ಸಿಗಬೇಕಾದ ತುಟ್ಟಿ ಭತ್ತೆಯನ್ನು ಸ್ಥಗಿತಗೊಳಿಸುವ ಆದೇಶ ನೀಡಿದರೂ, ಬೀಡಿಕಾರ್ಮಿಕ ಸಂಘಗಳು ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿ ಕಾರ್ಮಿಕ ಸಚಿವರ ಆದೇಶವನ್ನು ವಜಾಗೊಳಿಸುವಲ್ಲಿ ಯಶಸ್ವಿಯಾಗಿವೆ. ಉಚ್ಚ ನ್ಯಾಯಾಲಯದ ಆದೇಶದನ್ವಯ ಬಾಕಿಯಾದ ತುಟ್ಟಿಭತ್ತೆ ಸಾವಿರ ಬೀಡಿಗೆ 12.75ರೂ.ನಂತೆ ಮಾಲಕರು ನೀಡಬೇಕಿದೆ. ಬೀಡಿ ಕೈಗಾರಿಕೆಯ ಕಾನೂನಿನಂತೆ (ವಾರಕ್ಕೆ 4800 ಬೀಡಿಯಂತೆ) ಬೋನಸ್, ಹಬ್ಬದ ರಜೆ ಸಂಬಳ ಒಟ್ಟು ಸೇರಿ 2015ರ ಎಪ್ರಿಲ್ 1ರಿಂದ 2016ರ ಮಾ.31ರವರೆಗೆ 3702.01 ರೂ. ನೀಡಬೇಕು. ಈ ಬಗ್ಗೆ ಸಂಬಂಸಿ ಎಲ್ಲ ಬೀಡಿ ಕಂಪೆನಿಗಳ ಡಿಪೊಗಳಿಗೆ ಸಂಪೂರ್ಣ ಲೆಕ್ಕಾಚಾರದೊಂದಿಗೆ ಮನವಿ ನೀಡಲಾಗಿದೆ. ಮನವಿಯ ಪ್ರತಿಯನ್ನು ಕಾರ್ಮಿಕ ಇಲಾಖಾ ಕಾರ್ಯದರ್ಶಿ ಮತ್ತು ಕಾರ್ಮಿಕ ಇಲಾಖೆಯ ಅಕಾರಿಗಳಿಗೂ ನೀಡಲಾಗಿದ್ದರೂ ಈವರೆಗೆ ಯಾವುದೇ ಸ್ಪಂದನೆ ಇಲ್ಲದಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿದೆ ಎಂದು ಉಡುಪಿ ಜಿಲ್ಲಾ ಬೀಡಿ ೆಡರೇಶನ್‌ನ ಸದಸ್ಯ ಕವಿರಾಜ್ ಎಸ್. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಾ.20ರಂದು ಬೆಳಗ್ಗೆ 10ಕ್ಕೆ ಜಿಲ್ಲೆಯ ಎಲ್ಲ ಬೀಡಿ ಕಾರ್ಮಿಕರು ಬಸ್ ನಿಲ್ದಾಣದ ಬಳಿ ಒಟ್ಟು ಸೇರಿ ಮೆರವಣಿಗೆಯ ಮೂಲಕ ಭಾರತ್ ಬೀಡಿ ಕಂಪೆನಿಗೆ ಮುತ್ತಿಗೆ ಹಾಕಲಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News