×
Ad

ಸುಳ್ಯದಿಂದ ತಿರುವನಂತಪುರಕ್ಕೆ ಬಸ್

Update: 2017-03-19 00:08 IST

ಸುಳ್ಯ, ಮಾ.18: ಕೇರಳದ ರಾಜಧಾನಿ ತಿರುವನಂತಪುರ ಹಾಗೂ ಸುಳ್ಯ ಮಧ್ಯೆ ಕೇರಳ ರಾಜ್ಯ ಸಾರಿಗೆ ಇಲಾಖೆಯ 2 ಡಿಲಕ್ಸ್ ಬಸ್‌ಗಳು ಮಾ.12ರಿಂದ ಸಂಚಾರ ಆರಂಭಿಸಲಿವೆ. ಸಂಜೆ 5ಕ್ಕೆ ಸುಳ್ಯದಿಂದ ಬಿಡುವ ಈ ಬಸ್ ಮುಳ್ಳೇರಿಯ, ಕಾಸರಗೋಡು, ಕಣ್ಣೂರು, ಕೋಝಿಕೋಡ್, ತ್ರಿಶೂರ್, ಕೊಟ್ಟಾಯಂ ಮಾರ್ಗವಾಗಿ ಸಂಚರಿಸಿ ಮರುದಿನ ಬೆಳಗ್ಗೆ 8ಕ್ಕೆ ತಿರುವನಂತಪುರ ತಲುಪಲಿದೆ. ಅದೇ ರೀತಿ ಸಂಜೆ 5ಕ್ಕೆ ತಿರುವನಂತಪುರದಿಂದ ಬಿಡುವ ಬಸ್ ಮರುದಿನ ಬೆಳಗ್ಗೆ 8ಕ್ಕೆ ಸುಳ್ಯ ತಲುಪಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News