×
Ad

ಕಾಸರಗೋಡು: ಎ.1ರಿಂದ ಪ್ಲಾಸ್ಟಿಕ್ ಬಂದ್

Update: 2017-03-19 00:08 IST

ಕಾಸರಗೋಡು, ಮಾ.18: ಎಪ್ರಿಲ್ 1ರಿಂದ ಕಾಸರಗೋಡು ನಗರಸಭೆ ಪ್ಲಾಸ್ಟಿಕ್ ಮುಕ್ತ ನಗರಸಭೆ ಆಗಲಿದೆ. 51 ಮೈಕ್ರೋನ್‌ಗಿಂತ ಮೇಲಿನ ಪ್ಲಾಸ್ಟಿಕ್ ಚೀಲ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ನಗರಸಭಾ ಕಾರ್ಯದರ್ಶಿ ತಿಳಿಸಿದ್ದಾರೆ.

ಜನವರಿ 19ರಂದು ನಗರಸಭೆಯ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಎಪ್ರಿಲ್ 1ರಿಂದ ಈ ಆದೇಶ ಕಟ್ಟು ನಿಟ್ಟಾಗಿ ಜಾರಿಗೆ ಬರಲಿದೆ. ಏಪ್ರಿಲ್ 1ರಿಂದ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಮಾರಾಟ ಮಾಡುವುದಿಲ್ಲ ಎಂದು ವರ್ತಕರ ಒಕ್ಕೂಟ ಪ್ರಮಾಣಪತ್ರ ನೀಡಿದ್ದು, ಪ್ಲಾಸ್ಟಿಕ್ ಉತ್ಪನ್ನಗಳಾದ ಕ್ಯಾರಿ ಬ್ಯಾಗ್ , ಡಿಸ್ಪೋಸಿಬಲ್ ಕಪ್, ಪ್ಲೇಟ್, ಪ್ಲಾಸ್ಟಿಕ್ ಒಳಗೊಂಡ ಪೇಪರ್ ಪ್ಲೇಟ್, ್ಲೆಕ್ಸ್, ಬ್ಯಾನರ್, ಲಕ , ಸ್ಟ್ರೋ ಹೀಗೆ ಪ್ಲಾಸ್ಟಿಕ್ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News