ಬೃಹತ್ ರಕ್ತದಾನ ಶಿಬಿರ
ಮಂಗಳೂರು,ಮಾ.18: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ಫ್ರೆಂಡ್ಸ್ ಮಂಜನಾಡಿ ಹಾಗೂ ಅರೇಬಿಯನ್ ಫ್ರೆಂಡ್ಸ್ ಮಂಜನಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಮಂಜನಾಡಿಯ ಮದ್ರಸಾದಲ್ಲಿ ಇತ್ತೀಚೆಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಡಾ.ಎಮ್.ಬಿ. ಮುಹಮ್ಮದ್ ರವರು ಉದ್ಘಾಟಿಸಿದರು , ಕಾರ್ಯಕ್ರಮದ ಅದ್ಯಕ್ಷತೆಯನ್ನು ಇಸ್ಮಾಯೀಲ್ ವಹಿಸಿದರು.
ಮುಖ್ಯ ಅಥಿತಿಗಳಾಗಿ ಜನಾಬ್. ನೌಷಾದ್ ಕಲ್ಕಟ್ಟ, ಎನ್.ಎಸ್ ಕರೀಂ, ನಿಸಾರ್ ದಮ್ಮಾಮ್ ಉಳ್ಳಾಲ, ಹೈದರ್ ಮುಸ್ಲಿಯಾರ್ ಮಂಜನಾಡಿ,ಹುಸೈನ್ ಕುಂಞಿ ಮಂಜನಾಡಿ, ಬ್ಲಡ್ ಹೆಲ್ಪ್ ಲೈನ್ ವಲಯ ಎಡ್ಮಿನ್ ಗಳಾದ ನಾಸೀರ್ ಆರ್ ಬಿ ದೇರಳಕಟ್ಟೆ , ಹಾಗೂ ಸಾದೀಕ್ ಪಾವೂರು,ಶಾಕಿರ್ ಕಲ್ಕಟ್ಟ ಹಾಗೂ ಫೈಝಲ್ ಮಂಚಿ,ಡೊಡ್ಡಮನೆ ಇಸ್ಮಾಯಿಲ್,ಹಮೀದ್ ಯೂತ್,ಇಬ್ರಾಹಿಮ್ ಮೈಸೂರು ಬಾವ,ನವಾಝ್ ಮಂಜನಾಡಿ ಮುನೀರ್,ಹಾರೀಸ್, ನೌಷಾದ್ ಮಂಚಿ.ಶಾಜಹಾನ್ ಉಳ್ಳಾಲ.ನಿಝಾಂ ಅಡ್ಡೂರು.ಮುಝಮ್ಮಿಲ್ ಅಡ್ಡೂರು,ರಹ್ಮಾನ್ ಅಡ್ಡೂರು,ಅಬ್ದುಲ್ ರಹ್ಮಾನ್ ಚಂದಹಿತ್ಲು, ದಿಲ್-ಶಾನ್, ಬಶೀರ್ ಮಂಜನಾಡಿ ಹಾಗು ಇತರ ಸದಸ್ಯರು ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕೆ.ಎಮ್.ಕೆ ಮಂಜನಾಡಿ ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.