×
Ad

ನ್ಯಾಯ ಪ್ರಕರಣ ಕೈಗೆತ್ತಿಕೊಳ್ಳುವ ಮುನ್ನ ಸೂಕ್ತ ತಯಾರಿ ಅತ್ಯಗತ್ಯ: ನ್ಯಾ.ಉದಯ್

Update: 2017-03-19 00:18 IST

ಮಂಗಳೂರು, ಮಾ.18: ಯಾವುದೇ ನ್ಯಾಯ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮುನ್ನ ಅದರ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳುವುದು ಅತ್ಯಗತ್ಯ. ಈ ತಯಾರಿಯಲ್ಲಿ ಎಡವಿದರೂ ನ್ಯಾಯ ಕೈತಪ್ಪಿ ಹೋಗುವ ಸಾಧ್ಯತೆ ಇದೆ. ಹೀಗಾಗಿ ಕಾನೂನಿನ ಎಲ್ಲ ಆಯಾಮಗಳನ್ನೂ ತಿಳಿದುಕೊಳ್ಳಬೇಕಾಗಿರುವುದು ಅನಿವಾರ್ಯ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಜಸ್ಟಿಸ್ ಉದಯ್ ಉಮೇಶ್ ಲಲಿತ್ ಹೇಳಿದರು.

ನಗರದ ಎಸ್‌ಡಿಎಂ ಕಾನೂನು ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಬೆಳ್ಳಿಹಬ್ಬ ದತ್ತಿನಿಧಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ನಾಯಾಂಗ ವ್ಯವಸ್ಥೆಯು ಸಮಾಜದಲ್ಲಿ ಅತ್ಯಂತ ಗೌರವಯುತ ಹುದ್ದೆಯಾಗಿದೆ. ಹೀಗಾಗಿ ಯುವ ನ್ಯಾಯವಾದಿಗಳು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯ ಮಾಡಬೇಕು ಎಂದು ನುಡಿದರು.

ಪ್ರಸ್ತುತ ಸುಪ್ರಿಂಕೋರ್ಟ್‌ನಲ್ಲಿ ಸೇವೆ ಸಲ್ಲಿಸುವ 28 ನ್ಯಾಯಾಧೀಶರಲ್ಲಿ ಏಳು ಮಂದಿ ಹೊಸದಿಲ್ಲಿಯ ಒಂದೇ ಕಾಲೇಜಿನಲ್ಲಿ ಕಲಿತವರು ಎಂಬುದು ಗಮನಾರ್ಹ. ಅದರಲ್ಲೂ ಮೂವರು ಒಂದೇ ತರಗತಿಯವರು ಎಂಬುದು ವಿಶೇಷ ಎಂದವರು ತಿಳಿಸಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾ. ಉದಯ್ ಉಮೇಶ್ ಲಲಿತ್‌ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಪಪ್ರಾಂಶುಪಾಲೆ ಸುಸಮ್ಮ ಥಾಮಸ್, ವಿದ್ಯಾರ್ಥಿ ವಿಕ್ರಮ್ ಉತ್ತಯ್ಯ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಸಾಯಿನಾಥ್ ಸಮ್ಮಾನ ಪತ್ರ ವಾಚಿಸಿದರು. ಪ್ರಾಂಶುಪಾಲ ಡಾ. ತಾರಾನಾಥ್ ಶೆಟ್ಟಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News