ಪೈಚಾರ್: ಮಾ.25ರಂದು ಸ್ವಲಾತ್ ಕಾರ್ಯಕ್ರಮ
ಸುಳ್ಯ, ಮಾ.18: ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ 10ನೆ ವರ್ಷದ ವಾರ್ಷಿಕ ಸ್ವಲಾತ್ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ಮಾ.25ರಿಂದ 27ರವರೆಗೆ ಪೈಚಾರ್ ಬದ್ರಿಯಾ ನಗರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಬಿಜೆಎಂ ಖತೀಬ್ ಅಲ್ಹಾಜ್ ಜಾಫರ್ ಸಾದಿಕ್ ಕಾಮಿಲ್ ಸಖಾಫಿ ಉದ್ಘಾಟಿಸುವರು. ಸುಳ್ಯ ಗಾಂಧಿನಗರದ ಸೈಯದ್ ಕುಂಞಿಕೋಯ ಸಅದಿ ತಂಙಳ್ ದುಆ ನೆರವೇರಿಸಲಿದ್ದಾರೆ. ಕೇರಳ ಕಣ್ಣೂರು ವಾಗ್ಮಿ ಮನ್ಸೂರ್ ಅಲಿ ದಾರಿಮಿ ಮುಖ್ಯ ಭಾಷಣ ಮಾಡುವರು. ಮಾ.26ರಂದು ಹಂಝ ಮಿಸ್ಬಾಹಿ ಓಟಪದವು ಪ್ರವಚನ ನೀಡುವರು. ಮಾ.27ರಂದು ಸಮಾರೋಪ ಸಮಾರಂಭದಲ್ಲಿ ಸ್ವಲಾತ್ ನೇತೃತ್ವವನ್ನು ಅಲ್ಹಾಜ್ ಫಝಲ್ ಕೋಯಮ್ಮ ತಂಙಳ್ ಕೂರ ವಹಿಸುವರು. ಮುಖ್ಯ ಭಾಷಣಗಾರರಾಗಿ ಹಾಫಿಲ್ ಶಮೀಸ್ ಖಾನ್ ನಾಫಿ ಇಡುಕ್ಕಿ ಭಾಗವಹಿಸುವರು ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಪಿ.ಕೆ, ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಸತ್ತಾರ್ ಪೈಚಾರ್, ಪತ್ರಿಕಾ ಕಾರ್ಯದರ್ಶಿ ಅಬೂಸಾಲಿ, ನಿರ್ದೇಶಕ ರಫೀಕ್ ಹಾಗೂ ಕಾರುಣ್ಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಬಶೀರ್ ಆರ್.ಬಿ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.