ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ರಾತ್ರಿ ತರಗತಿ ಆರಂಭ
Update: 2017-03-19 00:26 IST
ಉಪ್ಪಿನಂಗಡಿ, ಮಾ.18: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ರಾತ್ರಿ ತರಗತಿಗಳನ್ನು ಆರಂಭಿಸಲಾಗಿದೆ.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಉದ್ದೇಶದಿಂದ ಆರಂಭಿಸಲಾಗಿರುವ ‘ಮಿಷನ್ 95+’ ಯೋಜನೆಯಡಿ ಈ ರಾತ್ರಿ ತರಗತಿಗಳು ನಡೆಯಲಿವೆ. ಆರಂಭಿಕ ಹಂತದಲ್ಲಿ 35 ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವವರೆಗೆ ತರಗತಿ ಮುಂದುವರಿಯಲಿದೆ ಎಂದು ಕಾಲೇಜಿನ ಉಪಪ್ರಾಚಾರ್ಯ ದಿವಾಕರ ಆಚಾರ್ಯ ತಿಳಿಸಿದ್ದಾರೆ.