ಸಮಸ್ತ ಜಂಇಯ್ಯತುಲ್ ಉಲಮಾ ದಕ್ಷಿಣ ಕರ್ನಾಟಕ ಮುಶಾವರಕ್ಕೆ ಆಯ್ಕೆ
Update: 2017-03-19 00:27 IST
ಸುಳ್ಯ, ಮಾ.18: ಸಮಸ್ತ ಜಂಇಯ್ಯತುಲ್ ಉಲಮಾ ದಕ್ಷಿಣ ಕರ್ನಾಟಕ ಮುಶಾವರದ ಅಧ್ಯಕ್ಷರಾಗಿ ದುಗ್ಗಲಡ್ಕ ಜಾಮಿಯ ಬುಖಾರಿಯ ಅರೇಬಿಕ್ ಕಾಲೇಜಿನ ಆಡಳಿತ ನಿರ್ದೇಶಕ ಸೈಯದ್ ಎಂ.ಪಿ.ಎಂ.ಝೈನುಲ್ ಆಬಿದೀನ್ ತಂಙಳ್ ಆಯ್ಕೆಯಾಗಿದ್ದಾರೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ನಡೆದ ಮುಶಾವರ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಇದರೊಂದಿಗೆ ಝೈನುಲ್ ಆಬಿದೀನ್ ತಂಙಳ್ ಚಿಕ್ಕಮಗಳೂರು, ಹಾಸನ, ಉಡುಪಿ, ದ.ಕ. ಜಿಲ್ಲೆಗಳಿಗೆ ಮುಶಾವರ ಅಧ್ಯಕ್ಷರಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.