ಮೋದಿಜಿ, ಮುಂದಿನ ಚುನಾವಣೆಯಲ್ಲಿ ಬಿಹಾರವೇ ನಿಮ್ಮನ್ನು ಸೋಲಿಸಲಿದೆ: ತೇಜಸ್ವಿ ಯಾದವ್

Update: 2017-03-19 06:02 GMT

ಪಾಟ್ನ,ಮಾ. 19: ಬಿಹಾರ ಉಪಮುಖ್ಯಮಂತ್ರಿತೇಜಸ್ವಿಯಾದವ್, ಮುಂದಿನ ಲೋಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಹಾರಿಗಳು ಸೋಲಿಸಲಿದ್ದಾರೆ ಎಂದಿದ್ದಾರೆ. ಅವರು ಬಿಹಾರ ವಿಧಾನಸಭೆಯಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಜಜೆಟ್ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು. 

ತೇಜಸ್ವಿ ಬಿಹಾರದ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲುಪ್ರಸಾದ್ ಯಾದವ್ ಪುತ್ರರಾಗಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ಹೆಸರನ್ನು ನೇರವಾಗಿ ಪ್ರಸ್ತಾವಿಸದ ತೇಜಸ್ವಿ ಮೋದಿಯನ್ನು ಸೋಲಿಸಲು ನಿತೀಶ್ ಸಮರ್ಥರು ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ. ಒಬ್ಬ ಬಿಹಾರಿ ಮೋದಿಜಿಯನ್ನು ಸೋಲಿಸುತ್ತಾರೆ ಎಂದು ಅವರು ಪ್ರತಿಕ್ರಿಯಿಸಿದರು. ಇದೇ ವೇಳೆ ಬಿಹಾರದಲ್ಲಿ ಮಹಾಮೈತ್ರಿಯ ಸರಕಾರ ಉತ್ತಮವಾಗಿ ಕೆಲಸಮಾಡುತ್ತಿದೆ ಎಂದು ತೇಜಸ್ವಿ ಹೇಳಿದರು.

   ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಸಮಯ ಅಗತ್ಯವಿದೆ. ಹಣ ಸಿಕ್ಕಂತೆ ರಸ್ತೆಯ ಕೆಲಸಗಳನ್ನು ಮಾಡಲಾಗುವುದು. ಎಲ್ಲ ರಸ್ತೆಗಳು ಒಮ್ಮೆಯೆ ಆಗುವುದು ಕಷ್ಟ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಸರಕಾರಿ ಏಜೆನ್ಸಿಗಳಿಗೆ ಸಂಪೂರ್ಣ ಭದ್ರತೆ ಒದಗಿಸಲಾಗುವುದು ಎಂದು ತೇಜಸ್ವಿಯಾದವ್ ಹೇಳಿದ್ದಾರೆ.

ಹೊಸ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ರಸ್ತೆ ಕಾಮಗಾರಿ ಆರಂಭವಾಗಿದೆ. ಇದರ ನಂತರ ಪಾಟ್ನ ಮತ್ತು ಬಿಹಟಾದಲ್ಲಿ ಪ್ರಸ್ತಾಪಿಸಲಾದ ಹೊಸ ಏರ್‌ಪೋರ್ಟ್ ನಡುವಿನ ದೂರವನ್ನು ಕೇವಲ 20ರಿಂದ 25 ನಿಮಿಷಗಳಲ್ಲಿ ಕ್ರಮಿಸಬಹುದು. ಹೀಗೆ ಹೊಸ ಏರ್‌ಪೋರ್ಟ್ ಜೊತೆಗೆ ಹೊಸ ಎಕ್ಸ್‌ಪ್ರೆಸ್ ರಸ್ತೆಯೂ ನಿರ್ಮಾಣಗೊಳ್ಳಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News