×
Ad

​ಛಾಯಾಗ್ರಾಹಕ ಅಪುಲ್ ಆಳ್ವಾರಿಗೆ ಸನ್ಮಾನ

Update: 2017-03-19 17:58 IST

ಮಂಗಳೂರು, ಮಾ.19: ಗ್ರಾಮಮಟ್ಟದಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಗ್ರಾಮಾಂತರ ಭಾಗದಲ್ಲಿ ಪರಸ್ಪರ ಒಡನಾಟ ಹಾಗೂ ಕೋಮು ಸೌಹಾರ್ದವನ್ನು ಕಾಯ್ದುಕೊಳ್ಳಲು ಸಾಧ್ಯ ಎಂದು ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ್ ಆರ್. ಕರ್ಕೇರ ಹೇಳಿದರು.

 ಇರಾ ಶಾಲಾ ಮೈದಾನಿನಲ್ಲಿ ಇರಾ ಚಾಲೆಂಜಿಂಗ್ ಫ್ರೆಂಡ್ಸ್ ಕ್ಲಬ್‌ನ ಆಶ್ರಯದಲ್ಲಿ ಶನಿವಾರ ರಾತ್ರಿ ನಡೆದ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 'ಸಿಎಫ್ ಸಿ' ಟ್ರೋಫಿ-2017ೞಉದ್ಘಾಟಿಸಿ ಅವರು ಮಾತನಾಡಿದರು.

ಇರಾ ಗ್ರಾಪಂ ಅಧ್ಯಕ್ಷ ಅಬ್ದುರ್ರಝಾಕ್ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು. ಛಾಯಾಚಿತ್ರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಅಪುಲ್ ಆಳ್ವ ಇರಾ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ನಿವೃತ್ತ ಅಂಚೆ ನೌಕರರಾದ ವಾಮನ ಪೂಜಾರಿ ತಾಳಿತ್ತಬೆಟ್ಟು, ಇರಾ ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ ಕೆ.ಟಿ, ಗ್ರಾಪಂ ಸದಸ್ಯರಾದ ಗೋಪಾಲ ಅಶ್ವತ್ಥಡಿ, ಉಮರ್ ಇರಾ, ರಮೇಶ್ ಪೂಜಾರಿ ಸಂಪಿಲ, ಮಂಗಳೂರು ವಿಧಾನ ಸಭಾ ಬಿಜೆಪಿ ಹಿಂದುಳಿದ ವರ್ಗ ಯುವ ಮೋರ್ಚಾದ ಕಾರ್ಯದರ್ಶಿ ಹರೀಶ್ ಇರಾ, ಇರಾ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮುರಳೀಧರ ಭಂಡಾರಿ, ಮಾಜಿ ಅಧ್ಯಕ್ಷ ಸುರೇಶ್ ರೈ ಸಂಪಿಲ, ಯುವ ಉದ್ಯಮಿ ಸಂತೋಷ್ ರೈ ಇರಾ, ಭಾರತ್ ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಪೂಜಾರಿ, ಬಿಜೆಪಿ ಇರಾ ವಲಯ ಅಧ್ಯಕ್ಷ ವರದರಾಜ್, ಪ್ರಮುಖರಾದ ಅಬೂಬಕರ್ ಪರಪು, ಹೈದರ್ ಸೈಟ್, ಉಮರ್ ಎಂ, ಇಬ್ರಾಹೀ ಟಿ., ಚಾಲೆಂಜಿಂಗ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಇಮ್ರಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News