ಅರ್ಜುನ್ ವೆಡ್ಸ್ ಅಮೃತ ಧ್ವನಿಸುರುಳಿ ಬಿಡುಗಡೆ
ಮಂಗಳೂರು, ಮಾ.19: ಬೆದ್ರ 9 ಕ್ರಿಯೇಷನ್ಸ್ ಲಾಂಛನದಲ್ಲಿ ರಘುಶೆಟ್ಟಿ ನಿರ್ದೇಶನದಲ್ಲಿ ತಯಾರಾದ 'ಅರ್ಜುನ್ ವೆಡ್ಸ್ ಅಮೃತ' ತುಳು ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವು ಶನಿವಾರ ನಗರದ ಪುರಭವನದಲ್ಲಿ ಜರಗಿತು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಕಿಶೋರ್ ಡಿ. ಶೆಟ್ಟಿ, ಮಿಫ್ಟ್ ಕಾಲೇಜಿನ ನಿರ್ದೇಶಕ ಎಂ.ಜಿ. ಹೆಗ್ಡೆ, 'ಅರ್ಜುನ್ ವೆಡ್ಸ್ ಅಮೃತ' ಚಿತ್ರದ ಸಂಗೀತ ನಿರ್ದೇಶಕರಾದ ಸುಮಾ ಎಲ್.ಎನ್. ಶಾಸ್ತ್ರಿ, ನಿರ್ದೇಶಕ ರಘು ಶೆಟ್ಟಿ, ನಟ ಅನೂಪ್ ಸಾಗರ್, ನಟಿ ಆರಾಧ್ಯ ಶೆಟ್ಟಿ ಉಪಸ್ಥಿತರಿದ್ದರು.
ಸಿನಿಮಾಕ್ಕೆ ಸಾಹಿತ್ಯ ರಚಿಸಿದ ಲೋಕು ಕುಡ್ಲ, ರಾಜೇಶ್ ಶೆಟ್ಟಿ, ದಾಮೋದರ ದೊಂಡೊಲೆ, ನೃತ್ಯ ನಿರ್ದೇಶಕರಾದ ತರುಣ್, ಕಿರಣ್‌ರಾಜ್, ಸಂಗೀತ ನಿರ್ದೇಶಕಿ ಸುಮಾ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವರ್ಣ ಸುಂದರ್, ಮಧು ಸುರತ್ಕಲ್, ಭೋಜರಾಜ ವಾಮಂಜೂರು, ಪಿ. ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು. ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.