×
Ad

ಶಾಲಾ ಶೂಟೌಟ್‌ನ ‘ಗನ್‌ಮ್ಯಾನ್’ ಬಲಪಂಥೀಯ ರಾಜಕಾರಣಿಯ ಪುತ್ರ

Update: 2017-03-19 19:45 IST

  ಪ್ಯಾರಿಸ್,ಮಾ.19: ತಾನು ಕಲಿಯುತ್ತಿದ್ದ ಶಾಲೆಯಲ್ಲಿ ಮನಬಂದಂತೆ ಗುಂಡುಹಾರಿಸಿ, ಶಾಲೆಯ ಪ್ರಾಂಶುಪಾಲ ಹಾಗೂ ಇಬ್ಬರು ವಿದ್ಯಾರ್ಥಿಗಳನ್ನು ಗಾಯಗೊಳಿಸಿದ್ದನೆನ್ನಲಾದ ಬಲಪಂಥೀಯ ಫ್ರೆಂಚ್ ರಾಜಕಾರಣಿ ಫ್ರಾಂಕ್ ಬಾರ್ಬೆಯಿ ಅವರ ಹದಿಹರೆಯದ ಪುತ್ರ, ಬಾರ್ಬಿ ಕಿಲಿಯಾನ್, ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದ ಅಮೆರಿಕನ್ ಶಾಲಾ ಶೂಟಿಂಗ್ ಘಟನೆಗಳು ಹಾಗೂ ಬ್ಯಾಟ್‌ಮ್ಯಾನ್ ಕಾಮಿಕ್ಸ್‌ನ ಖಳನಾಯಕ ಜೋಕರ್ ಪಾತ್ರದಿಂದ ಪ್ರಭಾವಿತನಾಗಿದ್ದನೆಂದು ಆತನ ವಿಚಾರಣೆ ನಡೆಸಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  17 ವರ್ಷದ ಬಾರ್ಬಿ ಕಿಲಿಯಾನ್, ಮಾರ್ಚ್ 16ರಂದು ರೈಫಲ್, ಎರಡು ಹ್ಯಾಂಡ್‌ಗನ್‌ಗಳು ಹಾಗೂ ಎರಡು ಗ್ರೆನೇಡ್‌ಗಳೊಂದಿಗೆ ಪ್ಯಾರಿಸ್ ಸಮೀಪದ ಶಾಲಾ ಕಟ್ಟಡಕ್ಕೆ ನುಗ್ಗಿ,ಯದ್ವಾತದ್ವಾ ಗುಂಡುಹಾರಿಸಿದ್ದನು.

ಅಮೆರಿಕನ್ ಶೈಲಿಯ ಸಾಮೂಹಿಕ ಗುಂಡೆಸತದ ವಿಡಿಯೋಗಳನಋ್ನ ವೀಕ್ಷಿಸಿದ ಬಳಿಕ ಆತ ಈ ದುಷ್ಕೃತ್ಯವನ್ನು ನಡೆಸಿರುವುದಾಗಿ ಫ್ರಾನ್ಸ್‌ನ ಆಂತರಿಕ ಸಚಿವಾಲಯ ತಿಳಿಸಿದೆ. ಘಟನೆಯಲ್ಲಿ 16 ವರ್ಷದ ವಿದ್ಯಾರ್ಥಿ ಜೂಲಿ ಹಾಗೂ 17 ವರ್ಷದ ವಿದ್ಯಾರ್ಥಿ ಆಕ್ರಂ ಎಂಬಾತ ಗಾಯಗೊಂಡಿದ್ದು, ಇತರ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಬಾರ್ಬಿಕಿಲಿಯಾನ್‌ನ ತಂದೆ ಫ್ರಾಂಕ್ ಅವರು ಫ್ರಾನ್ಸ್‌ನ ಬಲಪಂಥೀಯ ಆರ್‌ಪಿಎಫ್ ಪಕ್ಷದವರಾಗಿದ್ದು, ಮುನ್ಸಿಪಲ್ ಮಂಡಳಿಯ ಸದಸ್ಯರಾಗಿದ್ದಾರೆ. ಆರ್‌ಪಿಎಫ್ ಪಕ್ಷವು ಜಾಗದೀಕರಣ, ಯುರೋಪಿಯನ್ ಒಕ್ಕೂಟವಾದ ಹಾಗೂ ವಲಸೆ ನೀತಿಯ ವಿರುದ್ಧ ಹೋರಾಡುತ್ತಿದೆ.

ಬಾರ್ಬೆ ಗುಂಡಿನ ದಾಳಿ ನಡೆಸುವ ಮುನ್ನ ಆತ ತನ್ನ ಫೇಸ್‌ಬುಕ್ ಪುಟದಲ್ಲಿ ಕಪ್ಪು ಕೋಟ್ ಧರಿಸಿದ್ದು, ಒಂದು ಕೈಯಲ್ಲಿ ಪಿಸ್ತೂಲ್ ಹಾಗೂ ಇನ್ನೊಂದು ಕೈಯಲ್ಲಿ ರೈಫಲ್ ಹಿಡಿದಿರುವ ಮಾನವಅಸ್ಥಿಪಂಜರದ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದ.

 ಬಾರ್ಬೆ ಶೂಟೌಟ್ ನಡೆಸುವುದಕ್ಕೆ ಪೂರ್ವಭಾವಿ ಸಿದ್ಧತೆಯಾಗಿ, 1999ರಲ್ಲಿ ಅಮೆರಿಕದ ಕೊಲಂಬಿಯನ್ ಹೈಸ್ಕೂಲ್‌ನಲ್ಲಿ 12 ಮಂದಿ ಹತ್ಯಾಕಾಂಡಕ್ಕೆ ಕಾರಣವಾದ ಶೂಟೌಟ್ ಘಟನೆಯ ಬಗ್ಗೆ ಅಧ್ಯಯನ ನಡೆಸಿದ್ದನೆನ್ನಲಾಗಿದೆ.

ಪ್ಯಾರಿಸ್ ಸಮೀಪದ ಗ್ರಾಸೆಯಲ್ಲಿ ನಡೆದ ಶೂಟೌಟ್ ಘಟನೆಗೆ ಸಂಬಂಧಿಸಿ ಫ್ರಾನ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾರ್ಬೆಯಿ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದ್ದು, ಆತನ ವಿಚಾರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News