ಮೂಡುಬಿದಿರೆ: ಅಕ್ಯು ಪ್ರೆಸ್ಟೀಜ್ ಶೋ ರೂಮ್ ಶುಭಾರಂಭ
ಮೂಡುಬಿದಿರೆ, ಮಾ.19: ಇಲ್ಲಿನ ಅಲಂಗಾರಿನಲ್ಲಿರುವ ಅಕ್ಕೋ ಕ್ರಿಸ್ಟಲ್ ಕಾಂಪ್ಲೆಕ್ಸ್‌ನಲ್ಲಿ ಅಕ್ಯು ಪ್ರೆಸ್ಟೀಜ್ ಎಂಬ ಗ್ರಾನೈಟ್, ಟೈಲ್ಸ್ ಮತ್ತು ಸ್ಯಾನಿಟರಿ ಶೋ ರೂಮ್ ಮಾ. 19ರಂದು ರವಿವಾರ ಶುಭಾರಂಭಗೊಂಡಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ ಆಳ್ವ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ, ಗುಣಮಟ್ಟ ಹಾಗೂ ವೃತ್ತಿಪರತೆಯನ್ನು ಕಾಯ್ದುಕೊಂಡಲ್ಲಿ ಸಂಸ್ಥೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಪರಿಶ್ರಮ ಅಗತ್ಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ಮೂಡುಬಿದಿರೆ ತಾಲೂಕು ಘೋಷಣೆಯಾಗಿರುವ ಸಂದರ್ಭದಲ್ಲಿ ಇಲ್ಲಿನ ವ್ಯವಹಾರ ಕ್ಷೇತ್ರವೂ ಗಣನೀಯವಾಗಿ ಬೆಳವಣಿಗೆ ಕಾಣಲಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಹಾಗೂ ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ನಿರತರಾಗಬೇಕಿದೆ. ಇಲ್ಲಿನ ನಾಗರಿಕರ ಅವಶ್ಯಕತೆಗಳಿಗೆ ಅನುಗುಣವಾಗಿ ವ್ಯಾಪಾರ ಸಂಸ್ಥೆಗಳು ಸ್ಪಂದಿಸಬೇಕು. ಮಂಗಳೂರಿನಲ್ಲಿ ಅಕ್ಯು ಸಂಸ್ಥೆ ಗ್ರಾಹಕರ ಸೇವೆಗೆ ಹೆಸರುವಾಸಿಯಾಗಿದೆ. ಎಲ್ಲ ವರ್ಗದ ಜನರಿಗೆ ಉತ್ತಮ ಸೇವೆ ಸಂಸ್ಥೆಯಿಂದ ಸಿಗುವಂತಾಗಲಿ ಎಂದು ಹಾರೈಸಿದರು.
ಉದ್ಯಮಿಗಳಾದ ಹಮೀದ್ ಉಳ್ಳಾಲ್, ಮುಹಮ್ಮದ್ ಫಾರೂಕ್, ಅಬ್ದುಲ್ ರವೂಫ್ ಪುತ್ತಿಗೆ, ರಮಾನಾಥ್ ಸಾಲ್ಯಾನ್, ರಂಜಿತ್ ಪೂಜಾರಿ, ವಿಫುಲ್ ಬಾಲ್ದಾ, ಎಚ್. ಮುಹಮ್ಮದ್ ಇಕ್ಬಾಲ್ ಮೂಡುಬಿದಿರೆ, ಎಕೆ ಗ್ರೂಪ್‌ನ ಎ.ಕೆ. ಅಹ್ಮದ್, ಪುರಸಭಾ ಸದಸ್ಯ ಪಿ.ಕೆ. ಥೋಮಸ್, ಉದ್ಯಮಿ ಅಬುಲ್ ಆಲಾ ಪುತ್ತಿಗೆ, ಮೀರ್ ಮುಹಮ್ಮದ್ ಇಕ್ಬಾಲ್, ಅಲ್ ಫುರ್ಖಾನ್ ಸಂಸ್ಥೆಯ ಅಧ್ಯಕ್ಷ ಯು.ಎಮ್. ಮೊಯ್ದಿನ್ ಕುಂಞಿ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಎಮ್. ಜಿಯಾವುದ್ದೀನ್, ಉದ್ಯಮಿ ರವಿ ಪ್ರಸಾದ್ ಉಪಾಧ್ಯಾಯ ಹಾಗೂ ಸಂಸ್ಥೆಯ ಮಾಲಕ ಶಂಶುದ್ದೀನ್ ಉಪಸ್ಥಿತರಿದ್ದರು.
ಅಕ್ಯು ಪ್ರೆಸ್ಟೀಜ್ ಶೋ ರೂಮ್ ವೈಶಿಷ್ಟ್ಯ:
2 ಸಾವಿರ ಚದರಡಿಯ ವಿಶಾಲವಾದ ಶೋ ರೂಮ್, ಗ್ರಾನೈಟ್, ಟೈಲ್ಸ್ ಹಾಗೂ ಸ್ಯಾನಿಟರಿ ಹಾಗೂ ಪ್ಲಂಬಿಂಗ್ ಸಲಕರಣೆಗಳನ್ನೊಳಗೊಂಡು ಗ್ರಾಹಕರ ಅಗತ್ಯತೆ ಅನುಕೂಲತೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.
ಇಲ್ಲಿ ಗ್ರಾಹಕರಿಗೆ ವಿಶಾಲ ಶ್ರೇಣಿಗಳಲ್ಲಿ ಆಯ್ಕೆಯ ಅವಕಾಶಗಳಿದ್ದು, ಬ್ರಾಂಡೆಡ್ ಕಂಪೆನಿಗಳ ಉತ್ಪನ್ನಗಳು ಪ್ರಾಮಾಣಿಕ ಬೆಲೆಯಲ್ಲಿ ಲಭ್ಯವಿದೆ. ಟೈಲ್ಸ್‌ನಲ್ಲಿ ಸಿಂಪೊಲೋ, ಫೇವರಿಟ್, ರಾಯಲ್ ಟಚ್, ರೇಂಜ್ ಬ್ರಾಂಡ್‌ಗಳ ಉತ್ಪನ್ನಗಳು ವಿವಿಧ ಸ್ತರಗಳಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಉತ್ತಮ ಆಯ್ಕೆಯ ಅವಕಾಶವಿದೆ.
ಸ್ಯಾನಿಟರಿಯಲ್ಲಿ ಹಿಂದ್‌ವೇರ್, ಪ್ಯಾರಿವೇರ್, ಜಾಗ್ವಾರ್, ಜಲ್, ಬ್ಲೂಸ್ ಕಂಪೆನಿಗಳ ವಿವಿಧ ಉತ್ಪನ್ನಗಳಿವೆ. ಜೊತೆಗೆ ಕಟ್ಟಡ ನಿರ್ಮಾಣದಲ್ಲಿ ಬೇಕಾದ ಪೈಪ್ ಹಾಗೂ ಪ್ಲಂಬಿಂಗ್ ಸಲಕರಣೆಗಳ ಉತ್ತಮ ಸಂಗ್ರಹವಿದೆ.
ಅಕ್ಯು ಪ್ರೆಸ್ಟೀಜ್ ಸಂಸ್ಥೆಯು ದೇರಳಕಟ್ಟೆ ಹಾಗೂ ಪಾಂಡೇಶ್ವರದಲ್ಲಿ ಶಾಖೆಗಳನ್ನು ಹೊಂದಿದ್ದು, 2010ರಿಂದ ಗ್ರಾಹಕರ ಸೇವೆಯಲ್ಲಿ ನಿರಂತರವಾಗಿ ಗುರುತಿಸಿಕೊಂಡಿದೆ. ಸಂಸ್ಥೆಯು ಮಂಗಳೂರಿನ ತೊಕ್ಕೊಟ್ಟಿನಲ್ಲಿ ಗ್ರಾನೈಟ್ ಶೋ ರೂಮ್ ಅನ್ನು ಕೂಡಾ ಹೊಂದಿದ್ದು, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಹೆಸರುವಾಸಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಇದೀಗ ಮೂಡುಬಿದಿರೆಯಲ್ಲಿ ತನ್ನ ಶಾಖೆಯನ್ನು ತೆರೆಯುವುದರ ಮೂಲಕ ಇಲ್ಲಿನ ಗ್ರಾಹಕರಿಗೆ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದ್ದು, ಕಟ್ಟಡ ಹಾಗೂ ಮನೆ ನಿರ್ಮಾಣದ ಉದ್ದೇಶ ಹೊಂದಿರುವವರಿಗೆ ಪ್ರಾಮಾಣಿಕ ಸೇವೆಯನ್ನು ನೀಡುವ ಗುರಿಯನ್ನು ಹೊಂದಿದೆ.
ಶೋ ರೂಮ್ ಸಂಪರ್ಕಕ್ಕೆ: 9980996939, 9448088055