ದಕ್ಷಿಣ ಭಾರತದ ಅತ್ಯಂತ ಎತ್ತರದ 'ಭಂಡಾರಿ ವರ್ಟಿಕಾ' ವಸತಿ ಸಮುಚ್ಚಯ ಕಾಮಗಾರಿಗೆ ಚಾಲನೆ
ಮಂಗಳೂರು,ಮಾ.17: ಭಂಡಾರಿ ಬಿಲ್ಡರ್ಸ್‌ನವರ ಮಹತ್ವಾಕಾಂಕ್ಷೆಯ ವಸತಿ ಯೋಜನೆ ದಕ್ಷಿಣ ಭಾರತದ ಅತೀ ಎತ್ತರದ ಱಭಂಡಾರಿ ವರ್ಟಿಕಾ' ವಸತಿ ಸಮುಚ್ಚಯಕ್ಕೆ ಮಂಗಳೂರು ಕದ್ರಿಯ ಪಿಂಟೋಸ್ ಲೇನ್‌ನಲ್ಲಿ ಇಂದು(ರವಿವಾರ) ಸಂಸದ ನಳಿನ್ ಕುಮಾರ್ ಕಟೀಲ್ ,ಶಾಸಕ ಜೆ.ಆರ್.ಲೋಬೊ ಮತ್ತು ಉದ್ಯಮಿ ಟಿ.ಗೌತಮ್ ಪೈ ಚಾಲನೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮತನಾಡುತ್ತಾ, ದೇಶದಲ್ಲಿ 2020ಕ್ಕೆ ಪ್ರತಿಯೊಬರೂ ಮನೆ ಹೊಂದುವ ಯೋಜನೆಯನ್ನು ಸರಕಾರ ಹೊಂದಿದೆ.ಮಂಗಳೂರು ನಗರಲ್ಲಿ ಖಾಸಗಿಯವರ ಸಹಕಾರದೊಂದಿಗೆ ಈ ಯೋಜನೆ ಹೆಚ್ಚು ಬೇಗ ಯಶಸ್ಸನ್ನು ಕಾಣಬಹುದು ಭಂಡಾರಿ ವರ್ಟಿಕಾ ನಗರದ ವಿಶಿಷ್ಟ ವಸತಿ ಸಮುಚ್ಚಯ ಯೋಜನೆಯಾಗಿದೆ ಎಂದು ಶುಭ ಹಾರೈಸಿದರು.
ಯೋಜನೆಯ ಪ್ರತಿಕೃತಿಯನ್ನು ಅನಾವರಣಗೊಳಿಸಿದ ಶಾಸಕ ಜೆ.ಆರ್.ಲೋಬೊ ಮಾತನಾಡುತ್ತಾ, ನಗರದಲ್ಲಿನ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿದ್ದಾಗ ಅಭಿವೃದ್ಧಿ ಹೆಚ್ಚುತ್ತದೆ. ಹೆಚ್ಚು ಹೆಚ್ಚು ಬಂಡವಾಳ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆಯಿಂದ ನಗರದ ಅಭಿವೃದ್ಧಿ ಸಾಧ್ಯ. ಮಂಗಳೂರು ಸೇವಾ ಕೇಂದ್ರವಾಗಿ ಬೆಳೆಯಬೇಕಾಗಿದೆ. ಪಕ್ಕದ ಹಾಸನ ಜಿಲ್ಲೆಯಲ್ಲಿ ಕೈಗಾರಿಕೆಗಳ ವಿಸ್ತರಣೆಗೆ ಅವಕಾಶ ಹೆಚ್ಚಿದೆ. ಈ ನಡುವಿನ ಸಂಚಾರ ವ್ಯವಸ್ಥೆ ಇನ್ನಷ್ಟು ಅಭಿವೃದ್ಧಿ ಗೊಳ್ಳಬೇಕಾಗಿದೆ. ಸ್ಮಾರ್ಟ್ ಸಿಟಿ ಮಂಗಳೂರು ದೇಶದಲ್ಲಿ ಮಾದರಿ ನಗರವಾಗಿ ಅಭಿವೃದ್ಧಿ ಪಡಿಸಲು ಎಲ್ಲರ ಸಹಕಾರ ಮುಖ್ಯ ಎಂದರು.
ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಮಾತನಾಡುತ್ತಾ, ದಿವಂಗತ ಶ್ರೀನಿವಾಸ ಮಲ್ಯರ ಕಾಲದಿಂದ ವೇಗವಾಗಿ ಬೆಳವಣಿಗೆಯನ್ನು ಕಂಡ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಬಹುಮಹಡಿಗಳ ಕಟ್ಟಡಗಳ ನಗರವಾಗಿದೆ ಎಂದರು.
ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಮಾತನಾಡುತ್ತಾ, ವಿಶಿಷ್ಟ ವಿನ್ಯಾಸದ ಭಂಡಾರಿ ವರ್ಟಿಕಾ ವಸತಿ ಸಮುಚ್ಛಯ ಕೈಗಾರಿಕಾ ಹಬ್ಬ್ ಆಗುತ್ತಿರುವ ಮಂಗಳೂರಿನ ಹೆಮ್ಮೆಯ ಸಂಕೇತವಾಗಿದೆ ಎಂದರು.
ವಸತಿ ಸಮುಚ್ಚಯ ಕಾಮಗಾರಿ ಚಾಲನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಲ್ಲಾಳ್ ಹೊಟೇಲ್ ಗ್ರೂಫ್ ಆಫ್ ಹೊಟೇಲ್‌ಗಳ ಆಡಳಿತ ನಿರ್ದೇಶಕ ಕೆ.ಜಯವರ್ಮರಾಜ ಬಲ್ಲಾಳ್,ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕ ಶಶಿಧರ ಹೆಗ್ಡೆ,ಮನಪಾ ಸದಸ್ಯ ಡಿ.ಕೆ.ಅಶೋಕ್,ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ ಮೊದಲಾದವರು ಭಾಗವಹಿಸಿ ಶುಭಹಾರೈಸಿದರು.
ಭಂಡಾರಿ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕ ಲಕ್ಷ್ಮೀಶ್ ಭಂಡಾರಿ ಸ್ವಾಗತಿಸಿದರು. ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ,ಭಂಡಾರಿ ಬಿಲ್ಡರ್ಸ್‌ನ ನಿರ್ದೇಶಕಿ ನಿಖಿತಾ ಎಲ್ ಭಂಡಾರಿ ಉಪಸ್ಥಿತರಿದ್ದರು.
ಭಂಡಾರಿ ಬಿಲ್ಡರ್ಸ್‌ನ ಸಿಇಒ ವೇಣು ಶರ್ಮಾ ಸಮುಚ್ಚಯದ ಬಗ್ಗೆ ಮಾಹಿತಿ ನೀಡುತ್ತಾ,ಮಂಗಳೂರಿನಲ್ಲಿ ಪ್ರಥಮ ಬಾರಿಗೆ ವ್ಯಾಲೆಟ್ ಪಾರ್ಕಿಂಗ್ ಹೊಂದಿರುವ ವಸತಿ ಸಮುಚ್ಚಯವಾಗಿ ಭಂಡಾರಿ ವರ್ಟಿಕಾ ಮೂಡಿ ಬರಲಿದೆ. ಈ ವಸತಿ ಸಮುಚ್ಚಯ 56 ಅಂತಸ್ತುಗಳನ್ನು ಹೊಂದಿದೆ. 41 ಪ್ಲಾಟ್‌ಗಳನ್ನು ಹೊಂದಿದೆ. 34 ಅಂತಸ್ತಿನವರೆಗೆ ಒಂದು ಅಂತಸ್ತಿನಲ್ಲಿ ಒಂದು ಪ್ಲಾಟ್ ನಿರ್ಮಾಣಗೊಳ್ಳಲಿದೆ. ಉಳಿದಂತೆ ಮೇಲಿನ ಅಂತಸ್ತುಗಳಲ್ಲಿ ತಲಾ ಎರಡು ಪ್ಲಾಟ್‌ಗಳು ಮಾತ್ರ ಇರುತ್ತವೆ. ಪ್ರಥಮ ಬಾರಿಗೆ ಈ ವಸತಿ ಸಮುಚ್ಚಯದಲ್ಲಿ ಹಲವು ವಿಶೇಷ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ವಸತಿ ಸಮುಚ್ಚಯದ ಮೂರನೆ ಮಹಡಿಯಲ್ಲಿ ವಾತಾವರಣ ನಿಯಂತ್ರಿತ ಓರೊನೈಸ್ಡ್ ಸ್ವಿಮ್ಮಿಂಗ್ ಫೂಲ್, ಜಿಮ್, ಮಕ್ಕಳ ಆಟದ ಪ್ರಾಂಗಣ, ಸ್ಟೀಮ್ ಬಾತ್ ಆ್ಯಂಡ್ ಜಾಕುಸಿ, ಜಾಗರ್ಸ್ ಟ್ರಾಕ್,ಸೈಕ್ಲಿಂಗ್ ಬೇ, ರೂಫ್ ಟಾಫ್ ಪಾರ್ಟಿಹಾಲ್, ಸೆಂಟ್ರಲೈಸ್ಡ್ ಎ.ಸಿ, (ವಿಆರ್‌ಎಫ್) ಆರ್‌ಎಫ್‌ಐಡಿ ಲಿಪ್ಟ್, ಫೌಂಟೇನ್ ಯುಕ್ತ ಲ್ಯಾಂಡ್ ಸ್ಕೇಫ್ ಗಾರ್ಡ್‌ನ್,ವಾಟರ್ ಹೀಟರ್, ಸೋಲಾರ್, ಹಿಂಟ್ ಪಂಪ್, ವಿಶಾಲವಾದ ಪಾರ್ಕಿಂಗ್ ಏರಿಯಾ, ಬಾಸ್ಕೆಟ್ ಬಾಲ್ ಮತ್ತು ಸ್ಕೇಟಿಂಗ್ ರಿಂಕ್ ಪಾರ್ಕಿಂಗ್‌ನಲ್ಲಿರುವ ಎಲೆಕ್ಟ್ರಿಕಲ್ ಕಾರುಗಳಿಗೆ ಚಾರ್ಜಿಂಗ್ ಪಾಯಿಂಟ್‌ಗಳು,ಕಾರ್ ಆ್ಯಕ್ಸೆಸ್ ಎಂಟ್ರಿ,ಬ್ಯಾಕ್ ಎಂದು ತಿಳಿಸಿದ್ದಾರೆ.
ವಿಶೇಷ ಸುರಕ್ಷಾ ವ್ಯವಸ್ಥೆ:
ಮಂಗಳೂರಿನಲ್ಲಿ ಭಂಡಾರಿ ವರ್ಟಿಕಾ ಸಮುಚ್ಚಯದ ನಿವಾಸಿಗಳಿಗೆ ಪ್ರ್ರಥಮ ಬಾರಿಗೆ ವೀಡಿಯೋ ಡೋರ್ ಪೋನ್ ವ್ಯವಸ್ಥೆ, ಮುಖ್ಯದ್ವಾರದಲ್ಲಿ ಡಿಜಿಟಲ್ ಲಾಕ್, ಇಂಟಲಿಜೆಂಟ್ ಫೈರ್ ಡಿಟೆಕ್ಷನ್ ಮತ್ತು ಸಪ್ರೆಶನ್ ಸಿಸ್ಟಮ್, ಆಟೋಮ್ಯಾಟಿಕ್ ಎಂಟ್ರೆನ್ಸ್ ಗೇಟ್, ಬಯೋಮೆಟ್ರಿಕ್ ಡಿಜಿಟಲ್ ಲಾಕ್, ಡಿಜಿಟಲ್ ಎಂಟ್ರೆನ್ಸ್ ಲಾಬಿ, 360 ಡಿಗ್ರಿ ಸಿ.ಸಿಟಿವಿ ಕವರೇಜ್ ನಿರ್ವಹಣೆಯೊಂದಿಗೆ ಇಂಟಲಿಜೆಂಟ್ ಆ್ಯಕ್ಸೆಸ್, ಇಂಟ್ರೋಷನ್ ಅಲರಾಮ್, ಭಂಡಾರಿ ವರ್ಟಿಕಾ ರೆಸಿಡೆಂಟ್ ಆ್ಯಪ್, ಜೆಪಿಎಸ್ ಟ್ರಾಕರ್ ಜಿಯೋ ಫೆನ್ಸಿಂಗ್ ಅಲಾರ್ಮ್ ಹಾಗೂ ಭದ್ರತಾ ನಿಯಂತ್ರಣಾ ಕೊಠಡಿಗಳನ್ನು ಒಳಗೊಂಡಿದೆ.
ಎರ್ಮಜೆನ್ಸಿ ಲಿಫ್ಟ್ ಇವ್ಯಾಕ್ಯುವೇಶನ್ ಮತ್ತು ಕಾರು ಪರಿಶೀಲನಾ ವ್ಯವಸ್ಥೆಯು ಹೆಚ್ಚುವರಿ ಭದ್ರತಾ ದೃಷ್ಟಿಯಿಂದ ಕೈ ಗೊಳ್ಳಲಾಗಿದೆ. ಮಕ್ಕಳು ಹೊರಗೆ ಆಟವಾಡುತ್ತಿರುವಾಗ ಅವರ ಚಲನವಲನಗಳನ್ನು ಪ್ಲಾಟ್‌ನ ಒಳಗಿದ್ದೆ ಹಿರಿಯರು ಗಮನಿಸಬಹುದಾಗಿದೆ.ಕ್ಲಬ್ ಹೌಸ್‌ನ ಮಾಹಿತಿ ಹಾಗೂ ಇತರ ಬಿಲ್‌ನ ಮಾಹಿತಿ ಮನೆಯೊಳಗಿನ ಸ್ಕ್ರೀನ್‌ನಲ್ಲಿ ನಿವಾಸಿಗಳಿಗೆ ದೊರೆಯಲಿದೆ ಎಂದು ವೇಣು ಶರ್ಮ ತಿಳಿಸಿದ್ದಾರೆ.
ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.