×
Ad

ಜರ್ಮನಿಯಲ್ಲಿ ಕುರ್ದ್ ಬೆಂಬಲಿಗರಿಂದ ಎರ್ದೊಗಾನ್ ವಿರುದ್ಧ ಪ್ರತಿಭಟನೆ

Update: 2017-03-19 21:56 IST

 ಬರ್ಲಿನ್,ಮಾ.19: ಟರ್ಕಿಯಲ್ಲಿ ‘ಪ್ರಜಾಪ್ರಭುತ್ವ ಸ್ಥಾಪನೆ’ಗೆ ಆಗ್ರಹಿಸಿ ಹಾಗೂ ತನ್ನ ಅಧಿಕಾರವನ್ನು ವಿಸ್ತರಿಸುವಂತೆ ಕೋರಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗಾನ್ ನಡೆಸುವ ಜನಾಭಿಪ್ರಾಯ ಸಂಗ್ರಹದ ವಿರುದ್ಧ ಮತಚಲಾಯಿಸಬೇಕೆಂದು ಆಗ್ರಹಿಸಿ ಜರ್ಮನಿಯ ಫ್ರಾಂಕ್‌ಫರ್ಟ್ ನಗರದಲ್ಲಿ ರವಿವಾರ 30 ಸಾವಿರಕ್ಕೂ ಅಧಿಕ ಕುರ್ದಿಷ್ ಹೋರಾಟಗಾರರ ಪರ ಬೆಂಬಲಿಗರು ಬೃಹತ್ ರ್ಯಾಲಿ ನಡೆಸಿದರು.

ಈ ಮಧ್ಯೆ ಕುರ್ದಿಶ್ ಬೆಂಬಲಿಗರ ಪ್ರತಿಭಟನೆಗೆ ಟರ್ಕಿ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಅದು ಅಸ್ವೀಕಾರಾರ್ಹವಾಗಿದೆಯೆಂದು ಹೇಳಿದೆ. ಪ್ರತಿಟನಕಾರರಲ್ಲಿ ಹಲವರು, ಟರ್ಕಿಯ ವಿರುದ್ಧ ಕಳೆದ ಮೂರು ದಶಕಗಳಿಂದ ಸಶಸ್ತ್ರ ಹೋರಾಟ ನಡೆಸುತ್ತಿರುವ ಕುರ್ದಿಸ್ತಾನ್ ವರ್ಕರ್ಸ್‌ ಪಾರ್ಟಿ (ಪಿಕೆಕೆ)ಯ ಚಿಹ್ನೆಗಳನ್ನು ಪ್ರದರ್ಶಿಸಿದ್ದರು.

  ಎಪ್ರಿಲ್ 16ರಂದು ನಡೆಯುವ ಜನಾಭಿಪ್ರಾಯ ಸಂಗ್ರಹದ ಪರವಾಗಿ ಮತಚಲಾಯಿಸುವಂತೆ ಕೋರಿ ಟರ್ಕಿಯ ಸಚಿವರಿಗೆ ತನ್ನ ದೇಶದಲ್ಲಿ ಪ್ರಚಾರ ಮಾಡಲು ಜರ್ಮನಿ ಅನುಮತಿ ನಿರಾಕರಿಸಿರುವುದು ಉಭಯದೇಶಗಳ ನಡುವೆ ಬಿಕ್ಕಟ್ಟನ್ನು ಸೃಷ್ಟಿಸಿದೆ. ಫ್ರಾಂಕ್‌ಫರ್ಟ್‌ನಲ್ಲಿ ಇಂದು ನಡೆದ ರ್ಯಾಲಿಯಲ್ಲಿ ನಿರೀಕ್ಷೆಗಿಂತಲೂ ಅಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು, ಶಾಂತಿಯುತವಾಗಿ ನಡೆಯಿತೆಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

   ಕುರ್ದ್ ಜನಾಂಗೀಯರ ಪ್ರಾಬಲ್ಯವಿರುವ ಟರ್ಕಿಯ ಪ್ರದೇಶಗಳಲ್ಲಿ ನಿಷೇಧಿತ ಪಿಕೆಕೆ ಸಶಸ್ತ್ರ ಸಂಘರ್ಷವನ್ನು ನಡೆಸುತ್ತಿದೆ. 1984ರಿಂದ ಟರ್ಕಿಯ ವಿರುದ್ಧ ಪಿಕೆಕೆ ನಡೆಸುತ್ತಿರುವ ಬಂಡಾಯ ಸಮರದಲ್ಲಿ ಈವರೆಗೆ 24 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.

ಕುರ್ದಿಷ್ ನಾಯಕರಿಗೆ ಆಶ್ರಯ ನೀಡಿರುವುದಕ್ಕಾಗಿ ಜರ್ಮನಿ ವಿರುದ್ಧ ಟರ್ಕಿ ಆಕ್ರೋಶ ವ್ಯಕ್ತಪಡಿಸಿದೆ. ಟರ್ಕಿಯ ವಿದೇಶಾಂಗ ಸಚಿವಾಲಯವು ಕಳೆದ ಸೋಮವಾರ ನೀಡಿದ ಹೇಳಿಕೆಯೊಂದರಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಮೆರ್ಕೆಲ್ ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆಂದು ಆಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News