ಮಾರಿಪಳ್ಳ ರೆಸ್ಕ್ಯೂ ಟ್ರಸ್ಟ್‌ನಿಂದ ರಕ್ತದಾನ ಶಿಬಿರ
ಬಂಟ್ವಾಳ, ಮಾ. 19: ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಪುದುಪೇಟೆ ಮಾರಿಪಳ್ಳ ಇದರ ವತಿಯಿಂದ ಮಾರಿಪಳ್ಳ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ ರವಿವಾರ ಬೃಹತ್ ರಕ್ತದಾನ ಶಿಬಿರ ಹಾಗೂ ಟ್ರಸ್ಟ್‌ನ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ದಾರಿಮಿ ಅಸೋಸಿಯೇಷನ್‌ನ ಉಪಾಧ್ಯಕ್ಷ ಮಾಯಿನ್ ದಾರಿಮಿ, ರಕ್ತದಾನಕ್ಕೆ ಜಾತಿ ಧರ್ಮದ ಭೇದವಿಲ್ಲ. ಪವಿತ್ರ ಕುರ್‌ಆನ್ ಪ್ರತಿಪಾದಿಸಿದಂತೆ ಒಬ್ಬ ಮಾನವ ಜೀವ ಉಳಿಸಿದರೆ ಮಾನವ ಕುಲದ ಜೀವ ಉಳಿಸಿದ ಪ್ರತಿಫಲ ಸಿಗಲಿದೆ. ಒಬ್ಬ ಒಂದು ಬಾರಿ ನೀಡುವ ಒಂದು ಯುಟಿನ್ ರಕ್ತದಿಂದ ಮೂರು ಜನರ ಜೀವವನ್ನು ಉಳಿಸಲು ಸಾಧ್ಯವಿದೆ. ಜನಸಂಖ್ಯೆ ಹೆಚ್ಚಾದಂತೆ ರಕ್ತ ಬೇಡಿಕೆ ಹೆಚ್ಚಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ರಕ್ತ ಸಿಗದೆ ದಿನನಿತ್ಯ ನೂರಾರು ಜೀವಗಳು ಅಸುನೀಗುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ವ ಧರ್ಮಗಳನ್ನು ಒಳಗೊಂಡು ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡಿರುವ ರಕ್ತದಾನ ಶಿಬಿರ ಮಾದರಿಯಾಗಿದೆ. ಎಲ್ಲರೂ ಈ ಟ್ರಸ್ಟ್‌ಗೆ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಬ್ಬುಲ್ ಜಬ್ಬಾರ್ ವಹಿಸಿದ್ದರು. ಪುದು ಜಿಪಂ ಸದಸ್ಯ ರವೀಂದ್ರ ಕಂಬಳಿ, ತಾಪಂ ಸದಸ್ಯೆ ಪದ್ಮಶ್ರಿ ಡಿ. ಶೆಟ್ಟಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್‌ಖಾನ್ ಕೊಡಾಜೆ, ಸುಜೀರು ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮರ್ ಫಾರೂಕ್, ಮಂಗಳೂರು ಹೋಪ್ ಫೌಂಡೇಶನ್‌ನ ಸೈಫ್ ಸುಲ್ತಾನ್, ಬರಕಾಹ್ ಇಂಟರ್‌ನ್ಯಾಶನಲ್ ಸ್ಕೂಲ್ ಚೇರ್‌ಮ್ಯಾನ್ ಮುಹಮ್ಮಮ್ಮದ್ ಅಶ್ರಫ್ ಬಜ್ಪೆ, ಉದ್ಯಮಿ ಬಾಷಾ ಉಳ್ಳಾಲ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಪುದು ಗ್ರಾಪಂ ಅಧ್ಯಕ್ಷೆ ಆತಿಕಾ, ಉಪಾಧ್ಯಕ್ಷ ಮುಹಮ್ಮದ್ ಹಾಶೀರ್, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಉದ್ಯಮಿಗಳಾದ ಮನ್ಸೂರ್ ಅಹ್ಮದ್, ಇಸ್ಮಾಯಿಲ್ ಕೆಇಎಲ್, ಎ.ಕೆ.ನೌಷದ್, ಅರಫಾ ಗ್ರೂಫ್ ಚೇರ್‌ಮ್ಯಾನ್ ಕೆ.ಎಸ್.ಸಾವುಂಞಿ, ಫರಂಗಿಪೇಟೆ ಜುಮಾ ಮಸೀದಿ ಅಧ್ಯಕ್ಷ ಎಫ್.ಮುಹಮ್ಮದ್ ಬಾವ, ಮಾರಿಪಳ್ಳ ಜುಮಾ ಮಸೀದಿ ಉಪಾಧ್ಯಕ್ಷ ಅಬೂಬಕ್ಕರ್ ಬಾವ, ಕವಿ ಮುಹಮ್ಮದ್, ಪುದು ಗ್ರಾಪಂ ಸದಸ್ಯರಾದ ಎಂ.ಕೆ.ಖಾದರ್, ರಮ್ಲಾನ್ ಮಾರಿಪಳ್ಳ, ಕೆ.ಎಂ.ಸಿ. ಆಸ್ಪತ್ರೆಯ ವೈದ್ಯೆ ಡಾ. ರೇಣುಕಾದೇವಿ, ಎಸ್.ಎಂ.ಫಾರೂಕ್, ಹುಸೈನ್, ರೆಸ್ಕ್ಯೂ ಟ್ರಸ್ಟ್‌ನ ಗೌರವಾಧ್ಯಕ್ಷ ಬಾಷಾ, ಉಪಾಧ್ಯಕ್ಷ ಅಬ್ದುಲ್ ಲತೀಫ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ, ಖಜಾಂಚಿ ಹಕೀಮ್ ಮೊದಲಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ 93 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಸೈಯದ್ ಅಲ್ತಾಫ್ ಕಿರಾಅತ್ ಪಠಿಸಿದರು. ಶಿಕ್ಷಕ ಮುಹಮ್ಮದ್ ತುಂಬೆ ಸ್ವಾಗತಿಸಿದರು. ಖಾದರ್ ಫರಂಗಿಪೇಟೆ ಕಾರ್ಯಕ್ರಮ ನಿರೂಪಿಸಿದರು.