ವಿಕಲಚೇತನರು ಸೌಲಭ್ಯ ವಂಚಿತರಾಗಲು ಮಾಹಿತಿ ಕೊರತೆ ಕಾರಣ: ಶಿವಪ್ಪರಾಥೋಡ್

Update: 2017-03-19 18:41 GMT

ಪುತ್ತೂರು, ಮಾ.19: ಸಮಾಜದಲ್ಲಿ ಕಡೆಗಣಿಸಲ್ಪಟ್ಟ ವಿಕಚೇತನರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಮಾಹಿತಿಯ ಕೊರತೆಯ ಕಾರಣಕ್ಕೆಯೋಜನೆಗಳು ವಿಕಚೇತನರಿಗೆ ಸಮರ್ಪಕ ವಾಗಿ ಲಭಿಸುತ್ತಿಲ್ಲ. ಪ್ರತಿಯೊಬ್ಬರೂ ಈ ಕುರಿತು ಮಾಹಿತಿ ಹಂಚಿಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಶಿವಪ್ಪರಾಥೋಡ್ ಬಾಗಲಕೋಟೆ ಹೇಳಿದರು.

ಅವರು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಗ್ರಾಪಂ ವ್ಯಾಪ್ತಿಯ ವಿಕಚೇ ತನರ ಅರಿವಿನ ಸಿಂಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ವಿಕಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಅವರಿಗೆ ಸೂಕ್ತ ಸಾಧನ, ಸಲಕರಣೆ, ಅಡೆತಡೆ ರಹಿತ ವಾತಾವರಣ, ವಿಶೇಷ ಶಿಕ್ಷಣ, ಥೆರಫಿ ಚಿಕಿತ್ಸೆ ಸೇರಿದಂತೆ ಸೌಲಭ್ಯಗಳು ಅಗತ್ಯ. ಈ ಎಲ್ಲ ಸೌಲಭ್ಯ ಗಳಿಂದ ಅವರು ವಂಚಿತರಾಗದಂತೆ ಗಮನ ಹರಿಸಬೇಕು ಎಂದರು.

ಕೆಯ್ಯೂರು ಗ್ರಾಪಂ ಅಧ್ಯಕ್ಷ ಬಾಬು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಪಂ ಸದಸ್ಯ ಕಿಟ್ಟ ಅಜಿಲ, ಸುಬ್ರಹ್ಮಣ್ಯ, ತಾಪಂ ಸಿಬ್ಬಂದಿ ನವೀನ್‌ಕುಮಾರ್, ಮೋನಪ್ಪ, ರವೀಂದ್ರ ಆಚಾರ್ಯ, ಶಾಲಿನಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಕಲಚೇತನ ಸಾಧಕ ಕೆಯ್ಯೂರು ಗ್ರಾಮದ ಕಟ್ಟತ್ತಾರು ನಿವಾಸಿ ಮುಹಮ್ಮದ್ ರನ್ನು ಸನ್ಮಾನಿಸಲಾಯಿತು.

ಗ್ರಾಮ ಲೆಕ್ಕಾಧಿಕಾರಿ ವಾರಿಜಾ ಸ್ವಾಗತಿಸಿದರು. ಸೇಸಪ್ಪನೆಕ್ಕಿಲಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News