ಮಾ.23: ಬಜ್ಪೆ, ಇಡ್ಯಾ ಅಂಗಡಿ ಕೋಣೆಗಳ ಏಲಂ
Update: 2017-03-20 00:17 IST
ಮಂಗಳೂರು, ಮಾ.19: ಮಂಗಳೂರು ತಾಲೂಕು ಪಂಚಾಯತ್ ಅಧೀನಕ್ಕೆ ಒಳಪಟ್ಟ ಬಜ್ಪೆ ಗ್ರಾಮ ಪಂಚಾಯತ್ ಬಳಿ ಇರುವ ಅಂಗಡಿ ಸ್ಟಾಲು ನಂಬ್ರ 2, 3, 4 ಮತ್ತು 5 ನ್ನು ಮತ್ತು ಇಡ್ಯಾ ಗ್ರಾಮದ ಸ್ಟಾಲ್ ನಂಬ್ರ - 2 ಇದರ ಸಾರ್ವಜನಿಕ ಏಲಂ ಪ್ರಕ್ರಿಯೆ ಮಾ.23ರಂದು ನಡೆಯಲಿದೆ. ಮಾಸಿಕ ಶುಲ್ಕ ಪಾವತಿ ನೆಲೆಯಲ್ಲಿ ಅಂದು ಪೂರ್ವಾಹ್ನ 11 ಗಂಟೆಗೆ ತಾಪಂ ಸಭಾಂಗಣದಲ್ಲಿ ಏಲಂ ಮೂಲಕ ವಹಿಸಿಕೊಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.