ಸಿಡಿಮದ್ದು ತಯಾರಿಸುತ್ತಿದ್ದ ವೇಳೆ ಸ್ಪೋಟ; 2 ಸಾವು
Update: 2017-03-20 19:21 IST
ಮಂಗಳೂರು, ಮಾ.20: ಮನೆಯಲ್ಲಿ ಸಿಡಿಮದ್ದು ತಯಾರಿಸುತ್ತಿದ್ದಾಗ ಸ್ಫೋಟಗೊಂಡು ಇಬ್ಬರು ಸಾವಿಗೀಡಾದ ಘಟನೆ ಬಂಟ್ವಾಳ ತಾಲೂಕಿನ ಕಂಬಳಬೆಟ್ಟು ಎಂಬಲ್ಲಿ ಇಂದು ಸಂಭವಿಸಿದೆ.
ಆಸೀಮ್ ಮತ್ತು ಸುಂದರ್ ಈ ದುರಂತದಲ್ಲಿ ಮೃತಪಟ್ಟವರು.
ಆಸೀಮ್ ಮತ್ತು ಸುಂದರ್‌ಮನೆಯಲ್ಲಿ ಸಿಡಿಮದ್ದು ತಯಾರಿಸುತ್ತಿದ್ದಾಗ ಆಕಸ್ಮಿಕವಾಗಿ ಸ್ಪೋಟಗೊಂಡಿದೆ. ಅವರಿಬ್ಬರು ಸ್ಥಳದಲ್ಲೇ ಮೃತಪಟ್ಟರು. ಮನೆ ಸಂಪೂರ್ಣ ಧ್ವಂಸಗೊಂಡಿದೆ . ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.