×
Ad

ಪಾಕ್ ಧ್ವಜದ ಕೇಕ್‌ನ ನಕಲಿ ಚಿತ್ರ ಬಳಸಿ ಮಲಬಾರ್ ಗೋಲ್ಡ್ ವಿರುದ್ಧ ಅಪಪ್ರಚಾರ: ಅಪರಾಧಿಗೆ ಗಡಿಪಾರು ಶಿಕ್ಷೆ

Update: 2017-03-20 20:31 IST

ಮಂಗಳೂರು, ಮಾ.20: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆಯ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಅಪಪ್ರಚಾರ ನಡೆಸಿದ ಆರೋಪದಲ್ಲಿ ದುಬೈ ಸೈಬರ್ ಪೊಲೀಸರ ವಿಭಾಗದಿಂದ ಬಂಧನಕ್ಕೊಳಗಾಗಿದ್ದ ಕೇರಳದ ತ್ರಿಶೂರ್ ಮೂಲದ ಬಿನೀಶ್ ಪುನಂಕಲ್ ಅರ್ಮುಗಂನನ್ನು ದುಬೈ ನ್ಯಾಯಾಲಯ ಗಡಿಪಾರು ಮಾಡಲು ಆದೇಶ ಮಾಡಿದೆ. ಜೊತೆಗೆ ಎರಡೂವರೆ ಲಕ್ಷ ದಿರ್ಹಮ್ ದಂಡ ವಿಧಿಸಿ ತೀರ್ಪು ನೀಡಿದೆ.

ಬಿನೀಶ್ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದ. ಸಾಮಾಜಿಕ ಜಾಲತಾಣದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆ ಪಾಕಿಸ್ತಾನದ ಧ್ವಜದೊಂದಿಗೆ ಕೇಕ್ ಕತ್ತರಿಸುವ ನಕಲಿ ಪೋಟೊ ಬಳಸಿ ಅಪಪ್ರಚಾರದಲ್ಲಿ ತೊಡಗಿದ್ದಾನೆ ಎಂದು ಬಿನೀಶ್ ವಿರುದ್ಧ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆ ದುಬೈ ಪೊಲೀಸರಿಗೆ ದೂರು ನೀಡಿತ್ತು.

ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ, ಆತನ ವಿರುದ್ಧ ದುಬೈ ಪೊಲೀಸರು ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಜಾಲವನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ದುಬೈ ಫಸ್ಟ್ ಇನ್‌ಸೈನ್ಸ್ ಕೋರ್ಟ್ ಕ್ರಿಮಿನಲ್ ಪ್ರಕರಣ 10383/2017ರ ಬಗ್ಗೆ ಮಾರ್ಚ್ 13, 2017 ರಂದು ವಿಚಾರಣೆ ನಡೆಸಿ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News