×
Ad

ಮಂಗಳೂರು: ರೋಶನಿ ನಿಲಯದಲ್ಲಿ ಮಾ.22ರಿಂದ ಫಿಲಂ ಫೆಸ್ಟಿವಲ್

Update: 2017-03-20 20:43 IST

ಮಂಗಳೂರು.ಮಾ,20:ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸಹಮತ ಫಿಲಂ ಸೋಸೈಟಿ ಸಹಯೋಗದೊಂದಿಗೆ ರೋಶನಿ ನಿಲಯ ಸ್ಕೂಲ್ ಆಫ್ ಸೊಶಿಯಲ್ ವರ್ಕ್ ಸಂಸ್ಥೆ ಹಮ್ಮಿಕೊಂಡಿ ರುವ 'ಮಾನ' ೞಕಾರ್ಯಕ್ರಮದ ಪ್ರಯುಕ್ತ ಮಾರ್ಚ್ 22ರಿಂದ 26ರವರೆಗೆ ಸಂಸ್ಥೆಯ ಮರಿಯಾ ಪೈವಾ ಸಭಾಂಗಣದಲ್ಲಿ ಫಿಲ್ಮ್ ಫೆಸ್ಟಿವಲ್ ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 22ರಂದು ಸಂಜೆ 4 ಗಂಟೆಗೆ ಸಿನಿಮಾ ಹಬ್ಬದ ಉದ್ಘಾಟನೆಯನ್ನು ಹಿರಿಯ ಸಮಾಜ ಸೇವಕಿ ಡಾ.ಒಲಿಂಡಾ ಪಿರೇರಾ ನೆರವೇರಿಸಲಿದ್ದಾರೆ.ಸಂಜೆ 5 ಗಂಟೆಗೆ ಕೆನ್ಯಾದ ಚಲನಚಿತ್ರ, 23ರಂದು ಸಂಜೆ 5 ಗಂಟೆಗೆ ಬ್ರೆಝಿಲ್‌ನ ಚಲನಚಿತ್ರ, 24ರಂದು ಕೇತನ್ ಮೆಹ್ತಾರಾ ಮಿರ್ಚಿ ಮಸಾಲ, 25ರಂದು ಅಮೇರಿಕಾದ ಚಲನಚಿತ್ರ ಮತ್ತು 26ರಂದು ಬೆಳಗ್ಗೆ 9.30 ಕ್ಕೆ ಅಮೇರಿಕಾದ ಚಲನಚಿತ್ರ, ಮಧ್ಯಾಹ್ನ 12.30 ಗಂಟೆಗೆ ಶ್ಯಾಮ್ ಬೆನಗಲ್‌ರವರ 'ಮಂಥನ್ ' ಮತ್ತು ಸಂಜೆ 5 ಗಂಟೆಗೆ ಇಂಗ್ಲೆಂಡಿನ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

ಮುಖ್ಯವಾಗಿ ಈ ಫಿಲಂ ಫೆಸ್ಟಿವಲ್ ಮೂಲಕ ವಿಶ್ವದಾದ್ಯಂತ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ, ಸಮುದಾಯಕ್ಕಾಗಿ ನಡೆಸಿದ ಹೋರಾಟಗಳ ವಿವರಗಳನ್ನು ಚಲನಚಿತ್ರ ಮಾಧ್ಯಮದ ಮೂಲಕ ಜನರಿಗೆ ತಲುಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News