ಎಸ್ಸೆಸ್ಸೆಫ್ ನಾಯಕರ ಪ್ರೋಲಾಝ್ ಶಿಬಿರ
ಕಾರ್ಕಳ, ಮಾ.20: ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ನಾಯಕರ ಪ್ರೋಲಾಝ್ ಶಿಬಿರವನ್ನು ಇತ್ತೀಚೆಗೆ ಕಾರ್ಕಳದ ಬಂಗ್ಲೆಗುಡ್ಡೆಯ ತ್ವೈಬಾ ಗಾರ್ಡನ್‌ನಲ್ಲಿ ಏರ್ಪಡಿಸಲಾಗಿತ್ತು.
ಸುರತುಲ್ ಮುಲ್ಕ್ ಇದರ ವಿಶದೀಕರಣದ ತರಗತಿಯನ್ನು ಜಿಲ್ಲಾ ಉಪಾ ಧ್ಯಕ್ಷ ಹನೀಫ್ ಸಅದಿ, ನಾಯಕರ ಜವಾಬ್ದಾರಿಯ ತರಗತಿಯನ್ನು ಕೆ.ಎಂ. ಮುಸ್ತಫಾ ನಹೀಮಿ ಹಾವೇರಿ, ನಾಯಕರ ಒಂದು ದಿನ ಎಂಬ ತರಗತಿ ಯನ್ನು ರಾಜ್ಯ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್, ಯೋಜನಾ ಮಂಡನೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ನಾವುಂದ ನಡೆಸಿಕೊಟ್ಟರು.
ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಅಶ್ರಫ್ ರಝಾ ಅಂಜದಿ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ, ರಾಜ್ಯದ ನೂತನ ನಾಯಕರು, ಮಾಜಿ ನಾಯಕರನ್ನು ಸನ್ಮಾನಿಸಲಾಯಿತು. ರಾಜ್ಯ ಮಾಜಿ ಉಪಾಧ್ಯಕ್ಷ ಕಲ್ಕಟ್ಟ ರಝ್ವಿ, ಜಿಲ್ಲಾ ಕೋಶಾಧಿಕಾರಿ ಮನ್ಸೂರ್ ಉಡುಪಿ, ಶಬ್ಬೀರ್ ಸಖಾಫಿ, ರವೂಫ್ ಖಾನ್ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಸಿ.ಆರ್.ರಹೀಂ ಸ್ವಾಗತಿಸಿ, ವಂದಿಸಿದರು. ಶಿಬಿರದಲ್ಲಿ ಜಿಲ್ಲೆಯ ಕಾರ್ಕಳ, ಉಡುಪಿ, ಕಾಪು ಮತ್ತು ಕುಂದಾಪುರ ಡಿವಿಷನ್ ಸಮಿತಿಯ ನಾಯಕರುಗಳು ಪಾಲ್ಗೊಂಡಿದ್ದರು.