×
Ad

ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಗೆ 1 ವರ್ಷ: ಮಾ.21ರಂದು ಮೆರವಣಿಗೆ, ಸಾರ್ವಜನಿಕ ಸಭೆ

Update: 2017-03-20 21:33 IST

ಮಂಗಳೂರು, ಮಾ.20: ನಗರದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಕೊಲೆ ಪ್ರಕರಣವು ಮಾರ್ಚ್ 21ರಂದು ಒಂದು ವರ್ಷವನ್ನು ಪೂರೈಸುತ್ತಿದ್ದು ಅದರಂಗವಾಗಿ ದೇಶ ಪ್ರೇಮಿ ಸಂಘಟನೆಗಳ ಒಕ್ಕೂಟದ ವತಿಯಿಂದ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ.

ನಗರದ ವೆಂಕಟರಮಣ ದೇವಸ್ಥಾನದ ಬಳಿಯಿಂದ ವಿನಾಯಕ ಬಾಳಿಗಾ ಮನೆವರೆಗೆ ಸಂಜೆ 4 ಗಂಟೆಗೆ ಮೆರವಣಿಗೆ ನಡೆಯಲಿದೆ.

ಬಳಿಕ ಸಿಬಿಇಯು ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News