×
Ad

ವಸತಿ ಯೋಜನೆಗೆ ಸೂಕ್ತ ಮಾರ್ಪಡು ಅಗತ್ಯ: ನಿತ್ಯಾನಂದ ಸ್ವಾಮಿ

Update: 2017-03-20 21:37 IST

ಕಾರ್ಕಳ, ಮಾ.20: ರಾಜ್ಯದ ಗ್ರಾಮ ಹಾಗೂ ನಗರಗಳ ಎಲ್ಲಾ ಬಡವರಿಗೆ ಕನಿಷ್ಟ 10 ಸೆಂಟ್ಸ್ ಹಿತ್ತಲು ಸಹಿತ ಮನೆಯನ್ನು ಉಚಿತವಾಗಿ ಒದಗಿಸಬೇಕು. ಇದಕ್ಕೆ ಬಡವರ ವಸತಿ ಯೋಜನೆಯನ್ನು ಸೂಕ್ತವಾಗಿ ಮಾರ್ಪಡಿಸಬೇಕು. ಈ ಎಲ್ಲಾ ನಿವೇಶನ ರಹಿತರ ಗಣತಿ ನಡೆಸಿ ಫಲಾನುಭವಿ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷ ನಿತ್ಯಾನಂದಸ್ವಾಮಿ ಸರಕಾರವನ್ನು ಆಗ್ರಹಿಸಿದ್ದಾರೆ.

ಕಾರ್ಕಳ ತಾಲೂಕಿನಾದ್ಯಂತ ಮನೆ ನಿವೇಶನ ಕೋರಿ ಸಲ್ಲಿಸಿದ ಅರ್ಜಿ ದಾರರು ಕಾರ್ಕಳ ಪುರಸಭೆ ಕಛೇರಿ ಎದುರು ಇತ್ತೀಚೆಗೆ ಹಮ್ಮಿಕೊಂಡ ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ನಗರ ಪ್ರದೇಶ ಸೇರಿ, ಸರಕಾರಿ ಮತ್ತು ಅರಣ್ಯ ಭೂಮಿ ಸಾಗುವಳಿಯಲ್ಲಿ ರುವ ಬಡವರ ಸರ್ವೇ ಮಾಡಿ, ಪಹಣಿಯ ಸಗುವಳಿ ಕಾಲಂನಲ್ಲಿ ಹೆಸರು ಸೇರ್ಪಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಯು. ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಕವಿರಾಜ್ ಎಸ್., ಶೇಖರ ಕುಲಾಲ್, ಸುನಿತಾ ಶೆಟ್ಟಿ, ದಾಮೋದರ ಆಚಾರ್, ಜಮೀಲಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News