×
Ad

ಮಾ.21-22: ​ಅಡ್ಡೂರಲ್ಲಿ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ

Update: 2017-03-21 10:42 IST

ಅಡ್ಡೂರು, ಮಾ.21: ಅಲ್-ಬದ್ರಿಯಾ ಅನ್ಸಾರುಲ್ ಮಸಾಕೀನ್ ಅಸೋಸಿಯೇಶನ್ ಅಡ್ಡೂರು ಇದರ ಆಶ್ರಯದಲ್ಲಿ ಎರಡು ದಿನಗಳ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು ಮಾ.21,22 ರಂದು ರಾತ್ರಿ 8.30ಕ್ಕೆ ಅಡ್ಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿ ಮೈದಾನದಲ್ಲಿ ನಡೆಯಲಿದೆ. ಮಾರ್ಚ್ 21 ಮಂಗಳವಾರದಂದು ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಕೆ.ಎಂ.ಮುಹಮ್ಮದ್ ಶರೀಫ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 

ಅಲ್-ಬದ್ರಿಯಾ ಅನ್ಸಾರುಲ್ ಮಸಾಕೀನ್ ಅಸೋಸಿಯೇಶನ್ ಅಧ್ಯಕ್ಷ ಎ.ಕೆ.ಅಶ್ರಪ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಸಜೀಪನಡು ಕೇಂದ್ರ ಜುಮಾ ಮಸೀದಿಯ ಖತೀಬ್ ಎನ್.ಎಂ.ಅಶ್ಫಾಕ್ ಫೈಝಿ ನಂದಾವರ ಕುಟುಂಬ ಜೀವನ ಎಂಬ ವಿಷಯವನ್ನು ಆದರಿಸಿ ಪ್ರಭಾಷಣ ಗೈಯಲಿದರೆ.

ಮಾರ್ಚ್ 22 ರಂದು ಅಬ್ದುಲ್ ಜಲೀಲ್ ರಹ್ಮಾನಿ ವನಿಯನ್ನೂರು ಕೇರಳ ಆಧುನಿಕ ಯುಗದಲ್ಲಿ ಮುಸ್ಲಿಂ ಯುವಕ ಯುವತಿಯರು ಎಂಬ ವಿಷಯವನ್ನು ಆಧರಿಸಿ ಮುಖ್ಯ ಪ್ರಭಾಷಣ ಗೈಯಲ್ಲಿದ್ದಾರೆ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಳು ಭಾಗವಹಿಸಲಿದ್ದಾರೆಂದು ಅಲ್-ಬದ್ರಿಯಾ ಅನ್ಸಾರುಲ್ ಮಸಾಕೀನ್ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಅಸ್ತಾರ್ ಅಡ್ಡೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News