×
Ad

ಮದ್ರಸ ಅಧ್ಯಾಪಕನ ಹತ್ಯೆ: ಕರ್ನಾಟಕ ದಾರಿಮಿ ಉಲಮಾ ಒಕ್ಕೂಟ ಖಂಡನೆ

Update: 2017-03-21 13:06 IST

ಮಂಗಳೂರು, ಮಾ.21: ಸಾಮಾಜಿಕ ದ್ರೋಹಿಗಳು ಸಮಾಜದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿ ಮತೀಯ ದ್ವೇಷವನ್ನು ಹರಡಲು ಹೊಂಚು ಹಾಕುತ್ತಿರುವ ದುಷ್ಟ ಶಕ್ತಿಗಳಿಂದ ಅಮಾಯಕ ಮದ್ರಸ ಅಧ್ಯಾಪಕರ ಹತ್ಯೆ ನಡೆದಿದೆ. ಈ ಅಮಾನುಷ ಕೃತ್ಯವನ್ನು ಕರ್ನಾಟಕ ದಾರಿಮಿ ಉಲಮಾ ಒಕ್ಕೂಟ ತೀವ್ರವಾಗಿ ಖಂಡಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನಿನ ಮುಂದೆ ತರಲು ಬೇಕಾದ ಎಲ್ಲಾ ಕ್ರಮವನ್ನು ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News