×
Ad

​ಮಾ.23 ರಂದು ಕೊಡಂಗಾಯಿಯಲ್ಲಿ ಸಮಸ್ತ ಸಮ್ಮೇಳನ

Update: 2017-03-21 15:53 IST

ವಿಟ್ಲ, ಮಾ.21: ಎಸ್ಕೆಎಸ್ಸೆಸ್ಸೆಫ್, ಎಸ್.ವೈ.ಎಸ್ ಹಾಗೂ ಎಸ್.ಬಿ.ವಿ. ಕೊಡಂಗಾಯಿ ಇದರ ವತಿಯಿಂದ ಸಮಸ್ತದ ಅಗಲಿದ ನೇತಾರರ ಅನುಸ್ಮರಣಾ ಸಮ್ಮೇಳನ ಹಾಗೂ ಮಿತ್ತಬೈಲು ಉಸ್ತಾದ್ ಅವರಿಗೆ ಸನ್ಮಾನ ಕಾರ್ಯಕ್ರಮವು ಮಾ.23 ರಂದು ಕೊಡಂಗಾಯಿ ಜಂಕ್ಷನ್ ನಲ್ಲಿ ನಡೆಯಲಿದೆ.

ಬೆಳಗ್ಗೆ ಸ್ಥಳೀಯ ಎಸ್.ವೈ.ಎಸ್. ಅಧ್ಯಕ್ಷ ಅಬೂಬಕ್ಕರ್ ಹಾಜಿ ಅವರು ಧ್ವಜಾರೋಹಣಗೈಯಲಿದ್ದು, ಸಂಜೆ ಸಮಸ್ತದ ದ.ಕ. ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರ ನೇತೃತ್ವದಲ್ಲಿ ಮಜ್ಲಿಸ್‌ನ್ನೂರ್ ಕಾರ್ಯಕ್ರಮ ನಡೆಯಲಿದೆ. ಬಳಿಕ ನಡೆಯುವ ಅನುಸ್ಮರಣಾ ಸಮ್ಮೇಳನದಲ್ಲಿ ಸೈಯದ್ ಅಲಿ ತಂಙಳ್ ಕುಂಬೋಳ್ ದುವಾಶೀರ್ವಚನಗೈಯುವರು. ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಅಬೂ ಸಿನಾನ್ ಕೆ.ಕೆ. ಇಸ್ಮಾಯಿಲ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್.ವೈ.ಎಸ್. ದ.ಕ.ಜಿಲ್ಲಾ ಉಪಾಧ್ಯಕ್ಷ ಕೆ.ಬಿ. ಅಬ್ದುಲ್ ಖಾದಿರ್ ದಾರಿಮಿ ಉದ್ಘಾಟಿಸುವರು. ಹನೀಫ್ ನಿಝಾಮಿ ಮಂಜೇಶ್ವರ ಮುಖ್ಯ ಭಾಷಣಗೈಯಲಿದ್ದಾರೆ. ಕೆ.ಎಂ.ಎ.ಕೊಡುಂಗಾಯಿ ಭಾಗವಹಿಸಲಿದ್ದಾರೆ.

ಇದೇ ವೇಳೆ ಇತ್ತೀಚೆಗೆ ಸಮಸ್ತದ ಉಪಾಧ್ಯಕ್ಷರಾಗಿ ಆಯ್ಕೆಯಾದ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ಅವರನ್ನು ಸನ್ಮಾನಿಸಲಾಗುವುದು. ಅಲ್ಲದೆ ಈ ಕಾರ್ಯಕ್ರಮಕ್ಕೆ ಹಲವಾರು ಧಾರ್ಮಿಕ, ಸಾಮಾಜಿಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News