×
Ad

ಮುಅಲ್ಲಿಂ ಪರೀಕ್ಷೆ : ಬಂಟ್ವಾಳ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್‌ಗೆ ಶೇ.100 ಫಲಿತಾಂಶ

Update: 2017-03-21 16:58 IST

ಮಂಗಳೂರು, ಮಾ.21: ಸಮಸ್ತ ಕೇರಳ ಇಸ್ಲಾಮ್ ಮದ್ರಸ ವಿದ್ಯಾಭ್ಯಾಸ ಬೋರ್ಡ್ ಬಂಟ್ವಾಳ ಮನಾರುಲ್ ಇಸ್ಲಾಂ ಮದ್ರಸದಲ್ಲಿ ಕಿರಿಯ, ಹಿರಿಯ, ಪ್ರೌಢ ವಿಭಾಗದಲ್ಲಿ ಮದ್ರಸ ಮುಅಲ್ಲಿಮರಿಗೆ ನಡೆಸಿದ ಪರೀಕ್ಷೆಯಲ್ಲಿ ಬಂಟ್ವಾಳ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಶೇ.100 ಫಲಿತಾಂಶ ದಾಖಲಿಸಿದೆ.

ಕಿರಿಯ ವಿಭಾಗದಲ್ಲಿ ಲೊರೆಟ್ಟೊಪದವು ಸದ್‌ರ್ ಮುಅಲ್ಲಿಂ ಪಿ.ಎಂ.ಹಂಝ ಮುಸ್ಲಿಯಾರ್ ಮರ್ಧಾಳ ಪ್ರಥಮ, ಮೈಂದಾಳ ಮದ್ರಸ ಮುಅಲ್ಲಿಂ ಆದಂ ಮದನಿ ದ್ವಿತೀಯ ಸ್ಥಾನಗಳಿಸಿದ್ದಾರೆ.

ಹಿರಿಯ ವಿಭಾಗದಲ್ಲಿ ಪಾಂಡವರಕಲ್ಲು ಸದ್‌ರ್ ಮುಅಲ್ಲಿಂ ಜಿ.ವೈ. ಅಬ್ದುರ್ರಝಾಕ್ ವೌಲವಿ ಗೇರುಕಟ್ಟೆ ಪ್ರಥಮ, ಸುಲ್ತಾನ್ ನಗರ ಸದ್‌ರ್ ಮುಅಲ್ಲಿಂ ಸಲೀಂ ಮುಸ್ಲಿಯಾರ್ ದ್ವಿತೀಯ ಸ್ಥಾನಗಳಿಸಿದ್ದಾರೆ.

ಪ್ರೌಢ ವಿಭಾಗದಲ್ಲಿ ರೇಂಜ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಯಹ್ಯಾ ಮುಸ್ಲಿಯಾರ್ ಮರ್ಧಾಳ ಪ್ರಥಮ ಸ್ಥಾನ ಪಡೆದಿದ್ದಾರೆ. ಪರೀಕ್ಷಾ ವೀಕ್ಷಕರಾಗಿ ಮುಫತ್ತಿಸ್ ಖಾಸಿಂ ಮುಸ್ಲಿಯಾರ್ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News