ಮದ್ರಸ ಅಧ್ಯಾಪಕರ ಕೊಲೆಗೆ ಖಂಡನೆ
Update: 2017-03-21 17:03 IST
ಮಂಗಳೂರು, ಮಾ.21: ಕಾಸರಗೋಡು ಚೂರಿ ಮದ್ರಸ ಅಧ್ಯಾಪಕ ರಿಯಾಝ್ ಮೌಲಯ ಕೊಲೆಗೈದವರನ್ನು ತಕ್ಷಣ ಪತ್ತೆಹಚ್ಚಬೇಕು ಎಂದು ಸುನ್ನಿ ಸಂದೇಶ ಆಗ್ರಹಿಸಿದೆ.
ಸುನ್ನಿ ಸಂದೇಶ ಪತ್ರಿಕಾ ಬಳಗದ ಸಭೆಯಲ್ಲಿ ಕೃತ್ಯವನ್ನು ಖಂಡಿಸಲಾಯಿತಲ್ಲದೆ, ತಪ್ಪತಸ್ಥರ ವಿರುದ್ಧ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿದೆ.
ಸಭೆಯಲ್ಲಿ ಕೆ. ಎಸ್. ಹೈದರ ದಾರಿಮಿ, ಕೆ.ಎಲ್. ಉಮರ್ ದಾರಿಮಿ, ಕುಕ್ಕಿಲ ದಾರಿಮಿ, ಮುಸ್ತಫ ಫೈಝಿ, ಸಿದ್ಧೀಕ್ ಫೈಝಿ, ನೌಶಾದ್ ಹಾಜಿ, ಸಿತಾರ್ ಮಜೀದ್ ಹಾಜಿ, ಇಬ್ರಾಹೀಂ ಹಾಜಿ ಕುಂಬಂಕುದಿ, ಎಂ. ಎ. ಅಬ್ದುಲ್ಲ ಹಾಜಿ ಬೆಳ್ಮ ಉಪಸ್ಥಿತರಿದ್ದರು.