×
Ad

ಕಾಂಗ್ರೆಸ್ ವಿಶ್ವದ ನಾಲ್ಕನೇ ಅತ್ಯಂತ ಭ್ರಷ್ಟ ಪಕ್ಷ ಎಂದು ಹೇಳಿದ ' ಬಿಬಿಸಿ ಸರ್ವೆ' ಯೇ ನಕಲಿ

Update: 2017-03-21 17:28 IST

 ಹೊಸದಿಲ್ಲಿ,ಮಾ.21: ನಕಲಿ ಸುದ್ದಿಗಳ ಪ್ರಸಾರದ ಅಪಾಯಗಳಿಗೆ ಇನ್ನೊಂದು ನಿದರ್ಶನ ಇಲ್ಲಿದೆ. ಬಿಬಿಸಿ ನಡೆಸಿತ್ತೆನ್ನಲಾದ, ಕಾಂಗ್ರೆಸ್ ವಿಶ್ವದಲ್ಲಿಯೇ ನಾಲ್ಕನೇ ಅತ್ಯಂತ ಭ್ರಷ್ಟಪಕ್ಷವೆಂಬ ಸಮೀಕ್ಷೆ ಕಳೆದ ಹಲವಾರು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡತೊಡಗಿತ್ತು.

ಈ ತಥಾಕಥಿತ ಸಮೀಕ್ಷೆಯಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲೆಂದರಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಮತ್ತು ಅದರ ನಾಯಕರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದರು. ಈ ವರದಿಯ ಸತ್ಯಾಸತ್ಯತೆಯ ತನಿಖೆಗೆ ಮುಂದಾದ ಡಿಎನ್‌ಎ ಸೋಷಿಯಲ್ ಮಿಡಿಯಾ ಹೋಕ್ಸ್ ಸ್ಲೇಯರ್‌ನಂತಹ ಗುಂಪುಗಳ ನೆರವಿನೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಮೀಕ್ಷಾ ವರದಿಯ ರೂಪದಲ್ಲಿ ಪೋಸ್ಟ್ ಆಗಿದ್ದ ಲೇಖನದ ಮೂಲ ಬಿಬಿಸಿಯಲ್ಲ,ವಾಸ್ತವದಲ್ಲಿ ಬಿಬಿಸಿ ನ್ಯೂಸ್ ಪಾಯಿಂಟ್ ಎಂಬ ವೆಬ್‌ಸೈಟ್ ಆಗಿತುಎನ್ನುವುದನ್ನು ಪತ್ತೆ ಹಚ್ಚಿದೆ.

ಬಿಬಿಸಿ ನ್ಯೂಸ್ ಪಾಯಿಂಟ್‌ನ ಲಾಂಛನ ಬಿಬಿಸಿಯ ಲಾಂಛನಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಆದರೆ ಸುದ್ದಿ ಹರಡತೊಡಗಿದಂತೆ ಬಳಕೆದಾರರು ನಿಜವಾದ ಬಿಬಿಸಿಯ ಲಾಂಛನವನ್ನು ತಮ್ಮ ಟೀಕೆಗಳೊಂದಿಗೆ ಬಳಸತೊಡಗಿದ್ದು, ಇದು ನಿಜಕ್ಕೂ ಬಿಬಿಸಿಯೇ ಸಮೀಕ್ಷೆಯನ್ನು ನಡೆಸಿತ್ತು ಎಂಬ ಅಭಿಪ್ರಾಯವನ್ನು ಜನರಲ್ಲಿ ಮೂಡಿಸಿತ್ತು.

ಬಿಬಿಸಿ ಇಂತಹ ವರದಿಗಳನ್ನು ಮಾಡುವುದಿಲ್ಲ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಸಮೀಕ್ಷಾ ವರದಿ ಸಂಪೂರ್ಣವಾಗಿ ನಕಲಿಯಾಗಿದೆ ಎಂದು ಬಿಬಿಸಿ ಇಂಡಿಯಾದ ಗೀತಾ ಪಾಂಡೆ ಟ್ವೀಟಿಸಿದ್ದಾರೆ. ಆದರೆ ಕಾಂಗ್ರೆಸ್‌ಗೆ ವಿಶ್ವದಲ್ಲಿಯೇ ನಾಲ್ಕನೇ ಅತ್ಯಂತ ಭ್ರಷ್ಟಪಕ್ಷವೆಂಬ ಹಣೆಪಟ್ಟಿ ಯನ್ನು ಹಚ್ಚಿದ್ದ ಈ ಸುದ್ದಿ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಬಿಟ್ಟಿದೆ.

ಈ ನಕಲಿ ಸುದ್ದಿಯನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ಹಾಗು ಸಂಘ ಪರಿವಾರದ ಬೆಂಬಲಿಗರು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿದ ಸ್ಕ್ರೀನ್ ಶಾಟ್ ಇಲ್ಲಿದೆ : 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News