ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಮಳೆ
Update: 2017-03-21 18:00 IST
ಬಂಟ್ವಾಳ, ಮಾ. 21: ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಗಾಳಿ, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆ ತಂಪೆರೆದಿದೆ.
ಮಾಣಿ, ಕಡೇಶ್ವಲ್ಯ, ಪೆರ್ನೆ, ಗಡಿಯಾರ, ಬುಡೋಳಿ, ಸೂರಿಕುಮೇರಿನಲ್ಲಿ ಭಾರೀ ಮಳೆಯಾದರೆ ಕಲ್ಲಡ್ಕ, ಮೆಲ್ಕಾರ್, ಬಿ.ಸಿ.ರೋಡಿನಲ್ಲಿ ತುಂತುರು ಮಳೆಯಾಗಿದೆ.
ಮಧ್ಯಾನ ಎಂದಿನಂತೆ ಬಿಸಿಲಿದ್ದರೆ ಸಂಜೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣ ಉಂಟಾಗಿತ್ತು. ಮಾಣಿ, ಕಡೇಶ್ವಲ್ಯ, ಪೆರ್ನೆ, ಗಡಿಯಾರ, ಬುಡೋಳಿ, ಸೂರಿಕುಮೇರು ಪರಿಸರದಲ್ಲಿ ಗಾಳಿ ಬೀಸಲಾರಂಭಿಸಿದ್ದು ಗಾಳಿಯೊಂದಿಗೆ ಸಿಡಿಲಿನ ಶಬ್ದವೂ ಕೇಳಿ ಬಂತು. ಬಳಿಕ ಮಾಣಿ, ಕಡೇಶ್ವಲ್ಯ, ಪೆರ್ನೆ, ಗಡಿಯಾರ, ಬುಡೋಳಿ, ಸೂರಿಕುಮೇರು ಪರಿಸರದಲ್ಲಿ ಭಾರೀ ಮಳೆಯಾದರೆ ಕಲ್ಲಡ್ಕ, ಮೆಲ್ಕಾರ್, ಬಿ.ಸಿ.ರೋಡಿನಲ್ಲಿ ತುಂತುರು ಮಳೆಯಾಗಿದೆ.