×
Ad

ಆಳ್ವಾಸ್‌ನಲ್ಲಿ ಛಾಯಾಚಿತ್ರ ಪತ್ರಿಕೋದ್ಯಮ ಕಾರ್ಯಾಗಾರ

Update: 2017-03-21 18:10 IST

ಮೂಡುಬಿದಿರೆ,ಮಾ.21: ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಫೋಟೋಗ್ರಫಿ ಫೋರಂನ ಜಂಟಿ ಆಶ್ರಯದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಯಿತು.

ಮಿಜಾರಿನ ಶೋಭಾವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆ ಸಂಪನ್ಮೂಲ ವ್ಯಕ್ತಿಯಾಗಿದ್ದರು.

‘ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಯಶಸ್ವಿಯಾಗಬೇಕಾದರೆ ವಿಭಿನ್ನ ದೃಷ್ಟಿಕೋನ ಹಾಗೂ ಸೃಜನಶೀಲತೆ ಅತ್ಯಗತ್ಯ. ದುಬಾರಿ ಕ್ಯಾಮರಾ ಖರೀದಿ ಮಾಡುವುದಕ್ಕಿಂತ ಹೆಚ್ಚಾಗಿ ಕ್ಯಾಮರಾ ಹಿಂದಿರುವ ಕಣ್ಣು ಹಾಗೂ ಬುದ್ದಿವಂತಿಕೆ ಮಹತ್ವದ ಪಾತ್ರವಹಿಸುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಘಟನೆಯನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯುವುದು ಛಾಯಾಗ್ರಹಣದ ಮೂಲಮಂತ್ರ. ಈ ಮೂಲಕ ಆದರೆ ಒಬ್ಬ ಸೃಜನಶೀಲ ಛಾಯಾಚಿತ್ರಗ್ರಾಹಕ ನೋಡುಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತಹ ಚಿತ್ರಗಳನ್ನು ತೆಗೆಯಬಹುದು’ಎಂದು ರವಿ ಪೊಸವಣಿಕೆ ತಿಳಿಸಿದರು.

  ಸುಮಾರು 40 ವಿದ್ಯಾರ್ಥಿಗಳು ಭಾಗವಹಿಸಿದ ಈ ಕಾರ್ಯಗಾರದಲ್ಲಿ ಪ್ರಕೃತಿಯ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಯಿತು.

ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ, ಉಪನ್ಯಾಸಕಿ ಗೀತಾ ಉಪಸ್ಥಿತರಿದ್ದರು. ನೀರಜ್ ಪ್ರಭಾಕರನ್ ಕಾರ್ಯಕ್ರಮ ನಿರೂಪಿಸಿದರು.ಚೈತನ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News