25ಕ್ಕೆ ಪ್ರಶಸ್ತಿ ವಿಜೇತ ಕಿರುಚಿತ್ರ ‘ದಾಳಿ’ ಪ್ರದರ್ಶನ
Update: 2017-03-21 19:09 IST
ಉಡುಪಿ, ಮಾ.21: ರಥಬೀದಿ ಗೆಳೆಯರು ಉಡುಪಿ ಮತ್ತು ಉಡುಪಿ ಚಿತ್ರ ಸಮಾಜದ ಆಶ್ರಯದಲ್ಲಿ ವೈದೇಹಿ ಅವರ ಕಥೆ ಆಧಾರಿತ ಮೇದಿನಿ ಕೆಳಮನೆ ನಿರ್ದೇಶನದ ಟೋಟೋ ಪ್ರಶಸ್ತಿ ವಿಜೇತ ಕಿರು ಚಿತ್ರ ‘ದಾಳಿ’ ಪ್ರದರ್ಶನ ಮಾ.25ರ ಶನಿವಾರ ಸಂಜೆ ಉಡುಪಿಯಲ್ಲಿ ನಡೆಯಲಿದೆ.
ಅಲ್ಲದೇ ನಿರ್ದೇಶಕರ ಜೊತೆ ಮಾತುಕಥೆ ಹಾಗೂ ಸ್ತ್ರೀಸಂವೇದನೆಯ 3 ಕಿರುಚಿತ್ರಗಳ ಪ್ರದರ್ಶನವೂ ಮಾ.25ರ ಸಂಜೆ 5:30ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಆಡಿಯೋ ವಿಶುವಲ್ ಹಾಲ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ವೈದೇಹಿ ಮತ್ತು ಮೇದಿನಿ ಕೆಳಮನೆ ಭಾಗವಹಿಸಲಿರುವರು ಎಂದು ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ. ಮುರುಳಿಧರ ಉಪಾಧ್ಯ ಹಿರಿಯಡ್ಕ ಮತ್ತು ಉಡುಪಿ ಚಿತ್ರ ಸಮಾಜದ ಸಂಚಾಲಕ ಪ್ರೊ.ಕೆ.ಫಣಿರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.