×
Ad

ನಿಟ್ಟೆ ಸಂಸ್ಥೆಯ ದಿನಾಚರಣೆ

Update: 2017-03-21 19:11 IST

ನಿಟ್ಟೆ, ಮಾ.21: ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸಾಂಸ್ಥಿಕ ದಿನಾಚರಣೆಯು ಮಾ.25ರ ಶನಿವಾರ ಅಪರಾಹ್ನ 2:15ಕ್ಕೆ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಮಣಿಪಾಲದ ಮಣಿಪಾಲ ಟೆಕ್ನಾಲಜೀಸ್‌ನ ಆಡಳಿತ ನಿರ್ದೇಶಕ ಗೌತಮ್ ಪೈ ಭಾಗವಹಿಸಲಿದ್ದಾರೆ. ನಿಟ್ಟೆ ವಿವಿಯ ಪ್ರೊ ಚಾನ್ಸಲರ್ (ಆಡಳಿತ) ಹಾಗೂ ಟ್ರಸ್ಟಿ ವಿಶಾಲ್ ಹೆಗ್ಡೆ, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎನ್.ಕೆ.ತಿಂಗಳಾಯ, ಪ್ರೊ.ಡಾ.ಎನ್.ಎಸ್.ಶೆಟ್ಟಿ ಗೌರವ ಅತಿಥಿಗಳಾಗಿರುವರು.

ಸಂಸ್ಥೆಯ ನಿರ್ದೇಶಕ ಡಾ.ಕೆ.ಶಂಕರನ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು 'ಮಹಿಷ ಮರ್ಧಿನಿ' ಯಕ್ಷಗಾನವನ್ನು ಮಹಾವೀರ್ ಪಾಂಡೆ ನಿರ್ದೇಶನದಲ್ಲಿ ಪ್ರದರ್ಶಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News