×
Ad

ಮದ್ರಸ ಅಧ್ಯಾಪಕನ ಕೊಲೆ : ದ.ಕ ಜಿಲ್ಲಾ ಅಝ್ಹರೀಸ್ ಖಂಡನೆ

Update: 2017-03-21 19:33 IST

ಮಂಗಳೂರು,ಮಾ.21: ಕಳೆದ ರಾತ್ರಿ ಕಾಸರಗೋಡಿನ ಚೂರಿ ಎಂಬಲ್ಲಿ ಮದ್ರಸ ಅಧ್ಯಾಪಕ ರಿಯಾಝ್ ಮುಸ್ಲಿಯಾರ್ (30)ಎಂಬವರ ಕೊಲೆಗೆ ಜಿಲ್ಲಾ ಅಝ್ಹರೀಸ್ ಅಸೋಷಿಯೇಶನ್ ಖಂಡನೆ ವ್ಯಕ್ತಪಡಿಸಿದೆ ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿ ಯೊಬ್ಬರನ್ನು ಶೀಘ್ರದಲ್ಲೇ ಬಂಧಿಸಬೇಕು ಮುಂದೆ ಇಂತಹ ಅನಾಹುತಗಳು ಆಗದಂತೆ ಕ್ರಮ ಜರಗಿಸಬೇಕೆಂದು ಆಗ್ರಹಿಸಿದೆ.

ಸಮಾಜದಲ್ಲಿ ಗೊಂದಲ, ಪರಸ್ಪರ ವೈರತ್ವ ಉಂಟು ಮಾಡಿ ಅಶಾಂತಿ  ಸೃಷ್ಟಿಸುವವರನ್ನು ಎಲ್ಲಾ ಧರ್ಮಿಯರು ತಿರಸ್ಕರಿಸಬೇಕೆಂದು ಧಾರ್ಮಿಕ ನಾಯಕರು ಸಮಾಜದ ಶಾಂತಿಗಾಗಿ ಐಕ್ಯತೆಗಾಗಿ ಒಗ್ಗಟ್ಟಾಗಿ ಪ್ರಯತ್ನಿಸಬೇಕೆಂದು ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News