25 : ಎಸ್‌ಕೆಪಿಎ ಕಾಪು ವಲಯದ ವತಿಯಿಂದ ಬೀಚ್ ಕ್ರೆಡಾಕೂಟ
ಕಾಪು,ಮಾ.21: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಎಸೋಸಿಯೇಶನ್ (ರಿ.) ದಕ್ಷಿಣ ಕನ್ನಡ - ಉಡುಪಿ ಜಿಲ್ಲೆ ಇದರ ಕಾಪು ವಲಯದ ರಜತ ಸಂಭ್ರಮದ ಪ್ರಯುಕ್ತ ಮಾ. 25ರಂದು ಕಾಪು ಉಳಿಯಾರಗೋಳಿ ಯಾರ್ಡ್ ಬೀಚ್‌ನಲ್ಲಿ ಸಂಘಟನೆಯ ಸದಸ್ಯರಿಗಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಬೀಚ್ ಕ್ರೆಡಾಕೂಟ ನಡೆಯಲಿದೆ ಎಂದು ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ರವಿ ಕುಮಾರ್ ತಿಳಿಸಿದರು.
ಕಾಪು ಪ್ರೆಸ್ ಕ್ಲಬ್‌ನಲ್ಲಿ ಮಾ. 21ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಮಟ್ಟದ ಹೊನಲು ಬೆಳಕಿನ ಬೀಚ್ ಕ್ರೆಡಾಕೂಟದ ಪ್ರಯುಕ್ತ ಬೀಚ್ ವಾಲಿಬಾಲ್, ಹಗ್ಗಜಗ್ಗಾಟ, ಕಬಡ್ಡಿ ಪಂದ್ಯಾಟ ಸಹಿತ ವೈಯಕ್ತಿಕ ಸ್ಪರ್ಧೆಗಳು ನಡೆಯಲಿವೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಾಪು ಶಾಸಕ ವಿನಯ ಕುಮಾರ್ ಸೊರಕೆ ಕ್ರೆಡಾಕೂಟವನ್ನು ಉದ್ಘಾಟಿಸಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರಾಜ್ಯ ಛಾಯಾಗ್ರಾಹಕರ ಸಂಘ ದಕ್ಷಿಣ ವಲಯದ ಅಧ್ಯಕ್ಷ ವಾಸುದೇವ ರಾವ್, ಎಸ್‌ಕೆಪಿಎ ಕಾಪು ವಲಯದ ಅಧ್ಯಕ್ಷ ಉದಯ ಮುಂಡ್ಕೂರು, ಕಾರ್ಯದರ್ಶಿ ವೀರೇಂದ್ರ ಎಸ್. ಪೂಜಾರಿ, ಕ್ರೆಡಾ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.