×
Ad

ಮದ್ರಸ ಅಧ್ಯಾಪಕನ ಹತ್ಯೆ : ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಷನ್ ಖಂಡನೆ

Update: 2017-03-21 20:14 IST

ಮಂಗಳೂರು,ಮಾ.21: ಕಳೆದ ರಾತ್ರಿ ಕಾಸರಗೋಡು ಚೂರಿ ಎಂಬಲ್ಲಿ ನಡೆದ ಕೊಟ್ಟಮುಡಿ  ಆಝಾದ್ ನಗರ ನಿವಾಸಿ ರಿಯಾಜ್ ಮುಸ್ಲಿಯಾರವರ ಭೀಕರ ಹತ್ಯೆಯನ್ನು ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಖಾಲಿದ್ ಅಮ್ಜದಿ ಸವಣೂರು ಇವರು ತೀವ್ರವಾಗಿ ಖಂಡಿಸಿದ್ದಾರೆ.

ಕೊಲೆಯ ಹಿಂದಿರುವ ದುಷ್ಟಶಕ್ತಿಗಳನ್ನು ಕಾನೂನಿನಡಿಯಲ್ಲಿ ತಕ್ಷಣ ಬಂಧಿಸಿ, ಅಪರಾಧಿಗಳಿಗೆ ಉಗ್ರ ಶಿಕ್ಷೆಯನ್ನು ನೀಡಬೇಕೆಂದೂ, ಅಲ್ಪಸಂಖ್ಯಾತರ ಸಮುದಾಯ ಹಾಗೂ ಆರಾಧನಾಲಯಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದೂ ಸಂಬಂಧಪಟ್ಟವರಲ್ಲಿ ಆಗ್ರಹಪಡಿಸಿದ್ದಾರೆ.

ಸಮುದಾಯ ಬಾಂಧವರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಾಗೃತೆವಹಿಸಬೇಕೆಂದೂ, ಶಾಂತಿ ಕಾಪಾಡಬೇಕೆಂದೂ ವಿನಂತಿಸಿಕೊಂಡಿದ್ದಾರೆ.

ಘಟನೆಗೆ ತೀವ್ರ ಸಂತಾಪವನ್ನು ಸೂಚಿಸುತ್ತಾ,ಮೃತರ ಹೆಸರಿನಲ್ಲಿ ಪ್ರತ್ಯೇಕ ಪ್ರಾರ್ಥನೆ ಹಾಗೂ ಮಯ್ಯಿತ್ ನಮಾಝ್ ನಿರ್ವಹಿಸಲು ಮುಸ್ಲಿಂ ಬಾಂಧವರಲ್ಲಿ ಪ್ರತ್ಯೇಕ ಪ್ರಕಟಣೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News