×
Ad

ಕೇಬಲ್ ದೂರು ಕೋಶ ಸ್ಥಾಪನೆ: ಎಡಿಸಿ ಅನುರಾಧ

Update: 2017-03-21 20:33 IST

ಉಡುಪಿ, ಮಾ.21: ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್(ರೆಗ್ಯುಲೇಶನ್) ಆ್ಯಕ್ಟ್ 1995 ಅಡಿಯಲ್ಲಿ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿಯನ್ನು ರಚಿಸಲಾಗಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ದೂರು ಕೋಶವನ್ನು ಆರಂಭಿಸಲಾಗಿದೆ. ಸ್ಥಳೀಯ ಕೇಬಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಕುರಿತ ದೂರುಗಳು/ಅಹವಾಲುಗಳು ಇದ್ದರೆ ಸಾರ್ವಜನಿಕರು ವಾರ್ತಾ ಇಲಾಖೆ ಕಚೇರಿಗೆ ದೂರುಗಳನ್ನು ಸಲ್ಲಿಸಬಹುದಾಗಿದೆ.

ಇದೇ ವೇಳೆ ಜಿಲ್ಲೆಯಲ್ಲಿ ನೊಂದಣಿಗೊಂಡಿರುವ ಎಲ್ಲಾ ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳು 30 ದಿನಗಳ ಒಳಗೆ ನೊಂದಣಿ ಪತ್ರದ ಪ್ರತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸಲ್ಲಿಸುವಂತೆ ನಿರ್ದೇಶಿಸಿದರು. ಮುಂದಿನ ಹಂತದಲ್ಲಿ ನೊಂದಣಿ ಪತ್ರ ನೀಡದ ಸಂಸ್ಥೆಗಳನ್ನು ಅನಧಿಕೃತ ಎಂದು ಪರಿಗಣಿಸಿ, ನೋಟಿಸ್ ನೀಡಿ, ಅವುಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಕೇಬಲ್ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಹಾಗೂ ಸಮಿತಿ ಯ ಸದಸ್ಯರುಗಳಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾಗಿ ಡಿಸಿಆರ್‌ಬಿ ರಾಮಕೃಷ್ಣ, ಶಿಕ್ಷಣತಜ್ಞ ರಾಮಕೃಷ್ಣ ರಾವ್, ಮನಃಶಾಸ್ತ್ರಜ್ಞ ಡಾ. ವಿರೂಪಾಕ್ಷ ದೇವರಮನೆ, ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬಿ.ಜಗದೀಶ್ ರಾವ್, ಸಮಾಜ ಶಾಸ್ತ್ರಜ್ಞ ದುಗ್ಗಪ್ಪ ಕಜೆಕಾರ್, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ವಿಶ್ವಾಸದ ಮನೆಯ ಪ್ರೇಮಾ ಮಾರ್ಗರೆಟ್ ಕರ್ಕಡ, ಪವರ್ ಸಂಸ್ಥೆಯ ದಿವ್ಯಾರಾಣಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News