ಉಡುಪಿ : ಜಿಲ್ಲಾ ಯೋಜನಾ ಸಮಿತಿಗೆ ಆಯ್ಕೆ
ಉಡುಪಿ, ಮಾ.21: ಜಿಲ್ಲಾ ಪಂಚಾಯತ್ ವ್ಯಾಪ್ತಿಯಡಿ ಬರುವ ಜಿಲ್ಲಾ ಯೋಜನಾ ಸಮಿತಿಗೆ ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದ್ದು, 32 ಸದಸ್ಯರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಉಡುಪಿ ಜಿಪಂ ಪ್ರಕಟಣೆ ತಿಳಿಸಿದೆ.
ಜಿಲ್ಲಾ ಯೋಜನಾ ಸಮಿತಿಯ ಚುನಾವಣೆ ನಿಯಮಾನುಸಾರವಾಗಿ ನಡೆದಿದ್ದು ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕುಂದಾಪುರ ತಾಪಂ ಸದಸ್ಯರಾದ ಪುಷ್ಪರಾಜ್, ಕರುಣ್‌ಕುಮಾರ್ ಪೂಜಾರಿ ಸಬ್ಲಾಡಿ, ಕಾರ್ಕಳ ತಾಪಂ ಸದಸ್ಯರಾದ ಹರೀಶ್ ನಾಯಕ್, ಚಂದ್ರಶೇಖರ್ ಶೆಟ್ಟಿ, ಉಡುಪಿ ತಾಪಂ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ಭುಜಂಗ ಶೆಟ್ಟಿ, ಶರತ್ ಕುಮಾರ್ ಬೈಲಕೆರೆ, ರಾಜೇಶ್ ಕುಮಾರ್ ಅಂಬಾಡಿ, ಜಿಪಂ ಸದಸ್ಯರಾದ ಗೌರಿ ದೇವಾಡಿಗ, ಶೀಲಾ ಕೆ ಶೆಟ್ಟಿ, ಉದಯ ಎಸ್ ಕೋಟ್ಯಾನ್, ದಿವ್ಯಶ್ರೀ ಗಿರೀಶ್ ಅಮೀನ್, ಶಶಿಕಾಂತ ಪಡುಬಿದ್ರೆ, ಜನಾರ್ಧನ ತೋನ್ಸೆ, ಶಿಲ್ಪಾ ಜಿ ಸುವರ್ಣ, ಶೋಭಾ ಜಿ ಪುತ್ರನ್, ಗೀತಾಂಜಲಿ ಎಂ.ಸುವರ್ಣ, ರಾಘವೇಂದ್ರ ಕಾಂಚನ್, ಪ್ರತಾಪ್ ಹೆಗ್ಡೆ ಮಾರಾಳಿ, ಬಟವಾಡಿ ಸುರೇಶ್, ಶಂಕರ ಪೂಜಾರಿ ಯಡ್ತರೆ, ಕುಂದಾಪುರ ತಾಪಂ ಸದಸ್ಯ ವೈಲೆಟ್ ಬರೆಟ್ಟೋ, ಜಿಪಂ ಸದಸ್ಯ ಹಾಲಾಡಿ ತಾರನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ನಗರ ಸ್ಥಳೀಯ ಸಂಸ್ಥೆಯಡಿ ಕಾಪು ಪುರಸಭೆ ಸದಸ್ಯರಾದ ಅಬ್ದುಲ್ ಹಮೀದ್, ಅನಿಲ್ ಕುಮಾರ್, ಕುಂದಾಪುರ ಪುರಸಬೆ ಸದಸ್ಯರಾದ ಶ್ರೀಧರ್ ಶೇರೆಗಾರ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ಶಿವ ಪೂಜಾರಿ, ಉಡುಪಿ ನಗರಸಭೆ ಸದಸ್ಯರಾದ ಶಶಿರಾಜ್ ಕುಂದರ್, ನಾರಾಯಣ ಪಿ.ಕುಂದರ್, ಸೆಲಿನ್ ಕರ್ಕಡ, ಕಾರ್ಕಳ ಪುರಸಬೆ ಸದಸ್ಯರಾದ ಅಶ್ಫಕ್ ಅಹಮ್ಮದ್, ಕಾಪು ಪುರಸಭೆ ಸದಸ್ಯರಾದ ಶಾಂತಲತ ಎಸ್. ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.